60 ಎಕರೆ ಕೆರೆಗೆ ಮರುಜೀವ: 5,000 ಜನರಲ್ಲಿ ಸ್ಫೂರ್ತಿ ತುಂಬಿದ ನಾಯಕ

Update: 2021-12-03 06:12 GMT

ತಮಿಳುನಾಡಿನ ಅಂದಿಪಾಳಯಮ್ ಕೆರೆಗೆ ಜೀವ ತುಂಬುವುದಕ್ಕಾಗಿ 5000 ಮಂದಿ ಒಟ್ಟಿಗೆ ಕೆಲಸ ಮಾಡಿದರು. ಅವರ ಪ್ರಯತ್ನದ ಫಲವಾಗಿ ಅವರ ಗ್ರಾಮಕ್ಕೆ ನೀರು ಬಂತು. ನೀರಿನೊಂದಿಗೆ ಜೀವಕಳೆಯು ಮರಳಿತು.

2019ರಲ್ಲಿ ಚೆನ್ನೈ ನಗರವು ತೀವ್ರ ನೀರಿನ ಅಭಾವವನ್ನು ಎದುರಿಸಿತು. ಅದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ಅದು ದೇಶದ ಇತರ ಭಾಗಗಳಿಗೂ ಎಚ್ಚರಿಕೆಯ ಕರೆಗಂಟೆಯಾಯಿತು.

ತಮಿಳುನಾಡಿನ 38 ಜಿಲ್ಲೆಗಳ ಪೈಕಿ 24 ಜಿಲ್ಲೆಗಳು ಬರ ಪರಿಸ್ಥಿತಿಯನ್ನು ಎದುರಿಸಿದವು. ಆದರೆ, ತಿರುಪ್ಪುರ್ ಎಂಬ ಸಣ್ಣ ಪಟ್ಟಣಕ್ಕೆ ನೀರಿನ ಅಭಾವ ಉಂಟಾಗಲಿಲ್ಲ. ಆದರೆ, 2002ರಿಂದಲೂ ಈ ಕೈಗಾರಿಕಾ ಪಟ್ಟಣವು ಜಲಕ್ಷಾಮವನ್ನು ಎದುರಿಸುತ್ತಾ ಬಂದಿತ್ತು. ಅಂದಿಪಾಳಯಮ್ ಕೆರೆಯ ಸುತ್ತ ಬೃಹತ್ ಪ್ರಮಾಣದಲ್ಲಿ ಕೈಗಾರಿಕೆಗಳು ತಲೆಎತ್ತಿದ ಹಿನ್ನೆಲೆಯಲ್ಲಿ ಕೆರೆ ಬತ್ತಿತು. ಕೆರೆಯ ಅಂತರ್ಜಲ ಮಟ್ಟ ಕುಸಿಯಿತು.

ಅಂತರ್ಜಲ ಮಟ್ಟವು 1,000 ಅಡಿ ಮಟ್ಟಕ್ಕೆ ಕುಸಿಯಿತು ಹಾಗೂ ಬೋರ್‌ವೆಲ್‌ಗಳು ಬತ್ತಿದವು. ಅಷ್ಟು ಆಳದಿಂದ ನೀರು ಮೇಲೆತ್ತಲು ಯಾವುದೇ ಸಾಧನವಿರಲಿಲ್ಲ’’ ಎಂದು ವೋಲಂಟರಿ ಆರ್ಗನೈಸೇಶನ್ ಫಾರ್ ಪೀಪಲ್‌ಎಂಪವರ್‌ಮೆಂಟ್ ಫಾರ್‌ರೂರಲ್ ಏರಿಯಾಸ್ ಬೈ ಯೂತ್ (ವೆಟ್ರಿ) ಎಂಬ ಸರಕಾರೇತರ ಸಂಘಟನೆಯ ಯೋಜನಾ ನಿರ್ದೇಶಕ ಕುಮಾರ್ ದುರೈಸಾಮಿ ಹೇಳುತ್ತಾರೆ.

ನೀರು ಪಡೆಯಲು ಇದ್ದ ಏಕೈಕ ದಾರಿಯೆಂದರೆ ಅಂತರ್ಜಲ ಮತ್ತು ಮೇಲ್ಮೈ ನೀರಿನ ಸಂಪನ್ಮೂಲವನ್ನು ಮರುಪೂರಣಗೊಳಿಸುವುದಾಗಿತ್ತು. ಅಂದಿಪಾಳಯಂ ಕರೆಒಣಗಿತ್ತು. ಕೆರೆಯ ಪ್ರಮುಖ ಜಲಮೂಲ ನೊಯ್ಯಲ್ ನದಿಯಾಗಿತ್ತು. ಆದರೆ, ಕೆರೆಯ 5 ಕಿಲೋ ಮೀಟರ್ ತ್ರಿಜ್ಯದಲ್ಲಿ ಭೂಕಬಳಿಕೆ ನಡೆದು ಕೆರೆಗೆ ನದಿಯ ಹರಿವು ನಿಂತು ಹೋಗಿತ್ತು.

ಆದರೆ ಇಂದು ವರ್ಷದ ಹೆಚ್ಚಿನ ಭಾಗದಲ್ಲಿ ಕೆರೆಯು ತುಂಬಿ ತುಳುಕುತ್ತಿದೆ. ಜನರು ಈಗ ನೀರಿನ ಕೊರತೆಯನ್ನು ಎದುರಿಸುತ್ತಿಲ್ಲ. 60 ಎಕರೆಯಲ್ಲಿ ವ್ಯಾಪಿಸಿರುವ ಕೆರೆಯ ಯಾವುದೇ ಭಾಗದಲ್ಲಿ ನಿಂತು ನೋಡಿದರೂ ಅಗಾಧ ಜಲರಾಶಿಯೇ ಕಾಣುತ್ತದೆ.

ಕುಮಾರ್ ದುರೈಸಾಮಿ ಮತ್ತು ಗ್ರಾಮದ 5,000 ನಿವಾಸಿಗಳ ನಿರಂತರ ಪ್ರಯತ್ನದ ಫಲವಾಗಿ ಈ ಬದಲಾವಣೆ ಸಾಧ್ಯವಾಗಿದೆ.

ಕೆರೆಗೆ ಮರುಜೀವ ನೀಡುವತ್ತ...

ಕೆರೆಗೆ ಪುನರುಜ್ಜೀವನ ನೀಡುವ ಕಾರ್ಯದ ಹೊಣೆಯನ್ನು ಹೊತ್ತ ಕುಮಾರ್ ನದಿ ಪಾತ್ರವನ್ನು ಅತಿಕ್ರಮಿಸಿದವರನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿದರು ಹಾಗೂ ಅತಿಕ್ರಮಣವನ್ನು ತೆರವುಗೊಳಿಸುವಂತೆ ಮನವಿ ಮಾಡಿದರು.

ಇತರ ಸಂದರ್ಭಗಳಲ್ಲಾದರೆ ನೂರಾರು ಕೈಗಾರಿಕೆಗಳನ್ನು ಅಲ್ಲಿಂದ ತೆರವುಗೊಳಿಸುವುದು ಕಷ್ಟದ ಕಾರ್ಯವಾಗಿತ್ತು. ಆದರೆ, ನೀರಿಗಾಗಿ ಪ್ರತಿಯೊಬ್ಬರೂ ಪಡುತ್ತಿದ್ದ ಬವಣೆಯ ಬಗ್ಗೆ ಎಲ್ಲರಿಗೂ ಅರಿವಿದ್ದುದರಿಂದ ಎಲ್ಲರೂ ಒಪ್ಪಿದರು ಎಂದು ಕುಮಾರ್ ಹೇಳುತ್ತಾರೆ.

ಇದರಿಂದಾಗಿ ಮಳೆ ನೀರು ಸರಾಗವಾಗಿ ಕೆರೆಗೆ ಹರಿದು ಬಂತು. ಮುಂದಿನ ಎರಡು ವರ್ಷಗಳಲ್ಲಿ ಕೆರೆಯಲ್ಲಿ ನೀರು ಸಂಗ್ರಹವಾಯಿತು. ಆದರೆ ನೀರಿನ ಮಟ್ಟ ಕೆರೆಯ ಮೂಲ ಸಾಮರ್ಥ್ಯಕ್ಕೆ ಏರಲಿಲ್ಲ. ಮಳೆ ನೀರು ಕಡಿಮೆಯಾದಾಗ ಕೆರೆಯೂ ಬರಿದಾಯಿತು’’ ಎಂದು ಅವರು ಹೇಳಿದರು. ಕೆರೆಯನ್ನು ಅದರ ಮೂಲ ಸಾಮರ್ಥ್ಯಕ್ಕೆ ತರಲು ಇನ್ನೂ ಹೆಚ್ಚಿನ ಉಪಕ್ರಮಗಳ ಅಗತ್ಯವಿತ್ತು.

ಆಗ, ಈ ಪಟ್ಟಣದ ಜನರ ಬಳಿಗೆ ಹೋದ ಕುಮಾರ್‌ಕೆರೆ ಪುನರುಜ್ಜೀವನ ಕಾರ್ಯಕ್ಕೆ ದೇಣಿಗೆ ನೀಡುವಂತೆ ವಿನಂತಿಸಿದರು. ಹಣಕಾಸು ನೆರವಿನ ಜೊತೆಗೆ ನಮಗೆ ದೈಹಿಕ ಶ್ರಮದ ಅಗತ್ಯವೂ ಇತ್ತು. ಕೆರೆಯ ಸ್ಥಿತಿಗತಿಗಳಿಗೆ ಅಲ್ಲಿನ ಜನರೇ ಹೊಣೆ. ಹಾಗಾಗಿ, ಕೆರೆಯನ್ನು ಮಲಿನಗೊಳಿಸಿದೆ ರಕ್ಷಿಸುವ ಜವಾಬ್ದಾರಿಯನ್ನು ಅವರು ಹೊತ್ತರು’’ ಎಂದು ಕುಮಾರ್ ಹೇಳಿದರು.

ಹಾಗಾಗಿ, ಸ್ಥಳೀಯರು ಕೆರೆಯ ಹೂಳೆತ್ತುವ ಕೆಲಸವನ್ನು ಆರಂಭಿಸಿದರು. ಆರಂಭದಲ್ಲಿ 3,000 ಗ್ರಾಮಸ್ಥರು ಪ್ರತಿ ರವಿವಾರ ಶ್ರದ್ಧೆಯಿಂದ ಹೂಳೆತ್ತುವ ಕೆಲಸ ಮಾಡಿದರು. ಕ್ರಮೇಣ ಈ ಸಂಖ್ಯೆ 5,000 ತಲುಪಿತು. ಅದೂ ಅಲ್ಲದೆ, ಕೆಲವರು 100 ರೂ. ದೇಣಿಗೆ ನೀಡಿದರೆ, ಕಾರ್ಪೊರೇಶನ್‌ಗಳು 10 ಲಕ್ಷ ರೂ.ವರೆಗೆ ನೀಡಿದವು.

ದಿನಕ್ಕೆ 15,000 ರೂ. ಬಾಡಿಗೆ ನೀಡಿ ಆರು ಮಣ್ಣು ಅಗೆಯುವ ಯಂತ್ರಗಳನ್ನು ಪಡೆಯಲು ಉದ್ಯಮಿಗಳು ಒಪ್ಪಿದರು. ಈ ಕ್ಷೇತ್ರದ ಪರಿಣತರು ತಾಂತ್ರಿಕ ಸಲಹೆಗಳನ್ನೂ ನೀಡಿದರು’’ ಎಂದು ಕುಮಾರ್ ಹೇಳುತ್ತಾರೆ.

ಇದರಿಂದಾಗಿ ಕೆರೆಯ ಆಳವು 1.5 ಮೀಟರ್‌ನಷ್ಟು ಹೆಚ್ಚಿತು. ಜೊತೆಗೆ ಎರಡು ದ್ವೀಪಗಳನ್ನು ನಿರ್ಮಿಸಿ ಅಲ್ಲಿ ಹಕ್ಕಿಗಳಿಗಾಗಿ ಹಣ್ಣು ನೀಡುವ ಮರಗಳನ್ನು ನೆಡಲಾಯಿತು. ನವೆಂಬರ್‌ನಲ್ಲಿ ಉತ್ತಮ ಮಳೆಯಾಯಿತು. ಅದರಿಂದಾಗಿ ಕೆರೆ ತುಂಬಿತು.

ಇಂದು ಕೆರೆಯ 3 ಕಿ.ಮೀ. ಪರಿಧಿಯಲ್ಲಿ 38 ಅಡಿ ಆಳದಲ್ಲಿ ನೀರು ಸಿಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಒಟ್ಟಾರೆ ಅಂತರ್ಜಲ ಮಟ್ಟವು 200 ಅಡಿಗೆ ಹೆಚ್ಚಿದೆ’’ ಎಂದು ಕುಮಾರ್ ಹೇಳುತ್ತಾರೆ.

ಎರಡು ವರ್ಷಗಳ ಕಾಲ ಸರಿಯಾಗಿ ಮಳೆಯಾಗದಿದ್ದರೂ, ಕೆರೆಯಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿಯುವುದಿಲ್ಲ. 2019ರ ತೀವ್ರ ಬರ ಪರಿಸ್ಥಿತಿಯ ಅವಧಿಯಲ್ಲೂ ನಮ್ಮನ್ನು ನೀರಿನ ಅಭಾವ ಕಾಡಲಿಲ್ಲ’’ ಎಂದು ಅವರು ಹೇಳುತ್ತಾರೆ.

ಕೃಪೆ: www.thebetterindia.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ