ಸಮಯ ಬಂದಾಗ ಮಾತನಾಡುತ್ತೇನೆ: ಗಾಂಧಿ ಕುಟುಂಬ ಕುರಿತ ಟ್ವೀಟ್ ಗೆ ಹರೀಶ್ ರಾವತ್ ಪ್ರತಿಕ್ರಿಯೆ

Update: 2021-12-23 05:29 GMT

ಹೊಸದಿಲ್ಲಿ: ಉತ್ತರಾಖಂಡ ಕಾಂಗ್ರೆಸ್‌ ನಾಯಕ ಹರೀಶ್‌ ರಾವತ್‌ ಇಂದು ತಮ್ಮ ಪಕ್ಷಕ್ಕೆ ಇನ್ನಷ್ಟು ಗೊಂದಲದ ಸಂಕೇತಗಳನ್ನು ತೋರಿಸಿದ್ದು, ಗಾಂಧಿ ಕುಟುಂಬವನ್ನು ಗುರಿಯಾಗಿಸಿಕೊಂಡು ಮಾಡಿರುವ ಟ್ವೀಟ್‌ಗಳಿಗೆ ಯಾವುದೇ ವಿವರಣೆ ನೀಡದೆ  ಸಮಯ ಬಂದಾಗ ಮಾತನಾಡುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲಿ  ನಡೆಯಲಿರುವ  ಉತ್ತರಾಖಂಡ್ ಚುನಾವಣೆಗೆ ಕಾಂಗ್ರೆಸ್‌ನ ಪ್ರಮುಖ  ಮುಖಂಡರಾಗಿರುವ ಹರೀಶ್ ರಾವತ್ ಅವರು ನಿನ್ನೆ ತಮ್ಮ ಟ್ವೀಟ್‌ಗಳಲ್ಲಿ ತಮ್ಮ ಕೈಗಳನ್ನು ಕಟ್ಟಲಾಗಿದೆ ಎಂದು ಭಾವಿಸಿದ್ದೇನೆ.  ನಾನು ವಿಶ್ರಾಂತಿ ಪಡೆಯಲು ಬಯಸಿದ್ದೇನೆ. ಮುಂದಿನ ಮಾರ್ಗ ಆಯ್ದುಕೊಳ್ಳುವ ಕುರಿತು ಭಗವಂತನ ಮಾರ್ಗದರ್ಶನ" ವನ್ನು ಆಶಿಸುತ್ತೇನೆ ಎಂದು ಹೇಳಿದ್ದಾರೆ.

ಗುರುವಾರ ಬೆಳಗ್ಗೆ ಸುದ್ದಿಗಾರರ ಪ್ರಶ್ನೆಗಳಿಂದ ಅವರು ಸಿಡಿದೆದ್ದರು.

"ಸಮಯ ಬಂದಾಗ ಎಲ್ಲವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಿಮ್ಮೊಂದಿಗೆ ಮಾತನಾಡದಿದ್ದರೆ ನಾನು ಬೇರೆ ಯಾರೊಂದಿಗೆ ಮಾತನಾಡುತ್ತೇನೆ? ನಾನು ನಿಮಗೆ ಕರೆ ಮಾಡುತ್ತೇನೆ. ಸದ್ಯಕ್ಕೆ ಸುಮ್ಮನೆ ಆನಂದಿಸಿ" ಎಂದು ಉತ್ತರಾಖಂಡ್ ಮಾಜಿ ಮುಖ್ಯಮಂತ್ರಿ  ಹೇಳಿದ್ದಾರೆ ರಾವತ್ ಹೇಳಿಕೆ ಕಾಂಗ್ರೆಸ್ಸಿನ ಚಿಂತೆಯನ್ನು ಹೆಚ್ಚಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News