ಡಾಲಿ ಧನಂಜಯ್‌ ನಟನೆಯ 'ಹೆಡ್‌ ಬುಶ್‌' ಸಿನೆಮಾ ತಂಡದ ವಿರುದ್ಧ ದೂರು

Update: 2023-06-09 09:47 GMT

ಬೆಂಗಳೂರು: ಡಾಲಿ ಧನಂಜಯ್‌ ನಟನೆಯ ಮತ್ತು ನಿರ್ಮಾಣದ 'ಹೆಡ್‌ ಬುಶ್‌' ಚಿತ್ರ ಈಗಾಗಲೇ ರಾಷ್ಟ್ರಾದ್ಯಂತ ಪ್ರದರ್ಶನಗೊಳ್ಳುತ್ತಿದೆ. ಅಗ್ನಿ ಶ್ರೀಧರ್‌ ಬರೆದ ಕಥೆಯನ್ನು ಅಧರಿಸಿ ಡಾನ್‌ ಜಯರಾಜ್‌ ಕುರಿತು ಈ ಸಿನೆಮಾ ತಯಾರಿಸಲಾಗಿತ್ತು.

ಇದೀಗ ಈ ಚಿತ್ರದ ಒಂದು ದೃಶ್ಯದಲ್ಲಿ ಡಾನ್ ಜಯರಾಜ್‌ ಪಾತ್ರವು ವೀರಗಾಸೆ ಮಾಡುವವರ ಮೇಲೆ ಹಲ್ಲೆ ಮಾಡುವಂತೆ ತೋರಿಸಲಾಗಿದೆ. ಇದರಿಂದ ವೀರಗಾಸೆಗೆ ಅವಮಾನ ಆಗಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು  ಚಿತ್ರದುರ್ಗದ ಹಿರಿಯೂರು ನಗರ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. 

ಇದನ್ನೂ ಓದಿ: ವೀರಗಾಸೆ ಕಲಾವಿದರಿಗೆ ಅವಮಾನ ಮಾಡಿಲ್ಲ: ನಟ ಡಾಲಿ ಧನಂಜಯ್ ಸ್ಪಷ್ಟನೆ

'ಹೆಡ್ ಬುಷ್' ಸಿನೆಮಾದಲ್ಲಿ ವೀರಭದ್ರನ ಅವತಾರವಾಗಿರುವ ವೀರಗಾಸೆ ವೇಷದಾರಿಗಳನ್ನು ನಟ ಡಾಲಿ ಧನಂಜಯ ಮನಬಂದಂತೆ ಕಾಲಿನಲ್ಲಿ ಹೊಡೆದಿರುವ ದೃಶ್ಯ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ' ಎಂದು ಆರೋಪಿಸಲಾಗಿದೆ. 

ಇದನ್ನೂ ಓದಿ: ಡಾಲಿ ಧನಂಜಯ್‌ ರ ʼಹೆಡ್‌ಬುಶ್‌ʼ ಸಿನಿಮಾ ಕುರಿತು ವಿವಾದ: ನಟ ಧನಂಜಯ್ ಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ, #WeStandWithDhananjaya ಟ್ರೆಂಡಿಂಗ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News