ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ

Update: 2022-07-26 05:48 GMT

ಉಡುಪಿ, ಜ.19: ದೊಡ್ಡಣಗುಡ್ಡೆ ನಿವಾಸಿ ಮಹಮ್ಮದ್ ಇಕ್ಬಾಲ್(44) ಎಂಬವರು ಅಣ್ಣನ ಮನೆಗೆ ಹೋಗಿ ಬರುವುದಾಗಿ ಹೇಳಿ ಜ.17ರಂದು ಬೆಳಗ್ಗೆ ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ: ಮಾನಸಿಕ ಅಸ್ವಸ್ಥತೆಯ ಖಾಯಿಲೆಯಿಂದ ಬಳಲುತ್ತಿದ್ದ ಉಪ್ಪೂರು ಕುದ್ರುಬೆಟ್ಟು ನಿವಾಸಿ ಕೃಷ್ಣಮೂರ್ತಿ ಸೇರ್ವೆಗಾರ್(58) ಎಂಬವವರು ಡಿ.10 ರಂದು ಅಕ್ಕನ ಮನೆಯಾದ ಕಾರ್ಕಳ ತಾಲೂಕಿನ ಅಂಡಾರು ಎಂಬಲ್ಲಿಗೆ ಹೋಗುವುದಾಗಿ ಹೇಳೆ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News