ಆರೋಗ್ಯ ಶಿಕ್ಷಣ ನೀಡುವ ಬೀದಿನಾಟಕ ಪ್ರದರ್ಶನ

Update: 2022-01-24 15:25 GMT

ಉಡುಪಿ, ಜ.24: ಉಡುಪಿ ಜಿಪಂ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಸಹಯೋಗದಲ್ಲಿ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಮುಂದಾಳತ್ವ ದಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳ ಕಲಾ ತಂಡದಿಂದ ‘ತಾಯಿ ಮತ್ತು ಮಕ್ಕಳ ಆರೋಗ್ಯ, ಕ್ಷಯರೋಗ ಮತ್ತು ಕೊರೋನ ಮಹಾಮಾರಿ’ ಕುರಿತು ಮಾಹಿತಿ ನೀಡುವ ಜಾನಪದ ಕಲಾ ಹಾಗು ಬೀದಿನಾಟಕವನ್ನು ಪ್ರದರ್ಶಿಸಲಾಯಿತು.

ಮಣಿಪಾಲದ ಟೈಗರ್ ಸರ್ಕಲ್ನಲ್ಲಿ ಸೋಮವಾರ ನಡೆದ ಈ ಆರೋಗ್ಯ ಶಿಕ್ಷಣ ಕಾರ್ಯಕ್ರಮವನ್ನು ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಡಾ.ಗೌರಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ತಾಲ್ಲೂಕು ಶಿಕ್ಷಣಾಧಿಕಾರಿ ಚಂದ್ರಕಲಾ, ರೋಟರಿ ಮಣಿಪಾಲ್ ಅಧ್ಯಕ್ಷ ಡಾ.ವಿರೂಪಾಕ್ಷ ದೇವರಮನೆ, ರೊಟೇರಿಯನ್ ಶ್ರೀಪತಿ, ಯುಪಿಎಂಸಿಯ ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ, ಅರ್ಥಶಾಸ್ತ್ರ ಉಪನ್ಯಾಸಕ ಚಂದ್ರ ಶೇಖರ್, ಬೀದಿ ನಾಟಕದ ನಿರ್ದೇಶಕ ರಾಮಾಂಜಿ ನಮ್ಮಭೂಮಿ, ಸಂಚಾಲಕಿ ಶಿಲ್ಪಶೆಟ್ಟಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.

ನಿಖಿಲ್ ವಿವೇಕಾನಂದ್ ಎನ್. ರಚನೆಯ ಬೀದಿನಾಟಕವನ್ನು ವಿದ್ಯಾರ್ಥಿ ಗಳಾದ ಚಿಣ್ಣಪ್ಪ, ಹರ್ಷಿತ್ ವಿ.ಶೆಟ್ಟಿ, ಹಿಮಲ್ ಕುಮಾರ್, ಪ್ರಾಕ್ಷ, ದೀಕ್ಷಾ ಆಚಾರ್ಯ, ಯಶ್ವಿತಾ, ಸಂಗೀತಾ, ನಿಧಿ, ಶ್ರಾವ್ಯಾ, ಮನ್ವಿತ್, ಬೀದಿನಾಟಕ ನಡೆಸಿಕೊಟ್ಟರು. ಇದೇ ತಂಡದಿಂದ 20 ಪ್ರದರ್ಶನಗಳು ಜಿಲ್ಲೆಯಾದ್ಯಂತ ನಡೆಯಲಿದೆ. ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ ಸ್ವಾಗತಿಸಿ ಕಾರ್ಯ ಕ್ರಮ ನಿರೂಪಿಸಿದರು, ಕಲಾವಿದೆ ಶಿಲ್ಪಜೋಶಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News