​ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್: ವೇಳಾಪಟ್ಟಿ ಪ್ರಕಟ

Update: 2022-01-24 16:34 GMT

ಉಡುಪಿ, ಜ. 24: 2020-21ನೇ ಸಾಲಿನ ಸರಕಾರಿ ಪ್ರೌಢಶಾಲಾ ಶಿಕ್ಷಕರ ಅಂತರ್ ಘಟಕ-ವಿಭಾಗದ ಹೊರಗಿನ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್‌ಗೆ ಸಂಬಂಧಿಸಿದಂತೆ ವೇಳಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕೌನ್ಸಿಲಿಂಗ್ ಮಂಗಳವಾರದಿಂದ ಪ್ರಾರಂಭಗೊಳ್ಳಲಿದೆ.

ಸಹ ಶಿಕ್ಷಕರ ಕ್ರಮಸಂಖ್ಯೆ 151-300ರವರೆಗಿನ 150 ಅರ್ಜಿಗಳಿಗೆ ಜನವರಿ 25ರಂದು, ಕ್ರಮ ಸಂಖ್ಯೆ 301-500ರವರೆಗಿನ 200 ಅರ್ಜಿಗಳಿಗೆ ಜನವರಿ ಜನವರಿ 27ರಂದು, ಕ್ರ.ಸಂಖ್ಯೆ 501ರಿಂದ 700ರವರೆಗಿನ 200 ಅರ್ಜಿಗಳಿಗೆ ಜನವರಿ 28 ರಂದು, ಕ್ರ.ಸಂಖ್ಯೆ 701ರಿಂದ 900ರವರೆಗಿನ 200 ಅರ್ಜಿಗಳಿಗೆ ಜನವರಿ 31ರಂದು, ಕ್ರ.ಸಂಖ್ಯೆ 901-1164 ರವರೆಗಿನ 264 ಅರ್ಜಿಗಳಿಗೆ ಫೆಬ್ರವರಿ 1ರಂದು ಬೆಳಗ್ಗೆ 10 ರಿಂದ ಹಾಗೂ ದೈಹಿಕ ಶಿಕ್ಷಕರ ಕ್ರ.ಸಂಖ್ಯೆ 1-196 ರವರೆಗಿನ 196 ಅರ್ಜಿಗಳಿಗೆ ಮತ್ತು ವಿಶೇಷ ಶಿಕ್ಷಕರ 1-124ರವರೆಗಿನ 124 ಅರ್ಜಿಗಳಿಗೆ ಫೆಬ್ರವರಿ 2ರಂದು ಬೆಳಗ್ಗೆ 9ರಿಂದ ಅಪರಾಹ್ನ 2 ಗಂಟೆಯವರೆಗೆ ಕೌನ್ಸಿಲಿಂಗ್ ನಡೆಯಲಿದೆ.

ಅಲ್ಲದೇ ಅಂತರ್ ಘಟಕ ವಿಭಾಗದ ಹೊರಗಿನ ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆಯ ಕೌನ್ಸಿಲಿಂಗ್‌ಗೆ ಸಂಬಂಧಿಸಿದಂತೆ, ಸಹಶಿಕ್ಷಕರು, ದೈ.ಶಿ.ಶಿಕ್ಷಕರು ಮತ್ತು ವಿಶೇಷ ಶಿಕ್ಷಕರಿಗೆ ಫೆಬ್ರವರಿ 3ರಂದು ಬೆಳಗ್ಗೆ 10ರಿಂದ ಮಣಿಪಾಲದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆಯು ನಡೆಯಲಿದ್ದು, ಅಂತಿಮ ಆದ್ಯತಾ ಪಟ್ಟಿಯಲ್ಲಿರುವ ಎಲ್ಲಾ ಶಿಕ್ಷಕರು ನಿಗದಿಪಡಿಸಿದ ವೇಳಾಪಟ್ಟಿಯಂತೆ ಕೌನ್ಸಿಲಿಂಗ್‌ಗೆ ಹಾಜರಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News