ಆಸ್ಟ್ರೇಲಿಯನ್ ಓಪನ್: ನಡಾಲ್ ಫೈನಲ್ ಗೆ, ದಾಖಲೆ 21ನೇ ಪ್ರಶಸ್ತಿ ಗೆಲ್ಲಲು ಇನ್ನು ಒಂದೇ ಹೆಜ್ಜೆ ಬಾಕಿ

Update: 2022-01-28 06:53 GMT
Photo: twitter

ಮೆಲ್ಬೋರ್ನ್, ಜ.28: ಸ್ಪೇನ್ ನ ಹಿರಿಯ ಟೆನಿಸ್ ಪಟು ರಫೆಲ್ ನಡಾಲ್ ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ಅವರನ್ನು ಮೊದಲ ಸೆಮಿ ಫೈನಲ್ ನಲ್ಲಿ  6-3, 6-2, 3-6, 6-3 ಸೆಟ್ ಗಳ ಅಂತರದಿಂದ ಮಣಿಸಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.

ಈ ಗೆಲುವಿನೊಂದಿಗೆ ನಡಾಲ್ 21ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ವಿಶ್ವದ ಮೊದಲ ಆಟಗಾರನೆಂಬ ಮಹತ್ವದ ದಾಖಲೆ ನಿರ್ಮಿಸಲು ಒಂದು ಹೆಜ್ಜೆಯಿಂದ ಹಿಂದಿದ್ದಾರೆ. ಈಗಾಗಲೇ 20 ಗ್ರ್ಯಾನ್ ಸ್ಲಾಮ್ ಜಯಿಸಿರುವ ನಡಾಲ್ ಎದುರಾಳಿಗಳಾದ ನೊವಾಕ್ ಜೊಕೊವಿಕ್ ಹಾಗೂ ರೋಜರ್ ಫೆಡರರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಟೆನಿಸ್ ಇತಿಹಾಸದಲ್ಲಿ ಶ್ರೇಷ್ಠ ಪುರುಷ ಆಟಗಾರನಾಗುವ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News