ರಾಷ್ಟ್ರ ಮಟ್ಟದ ಯೋಗ ಚಾಂಪಿಯನ್‌ಶಿಪ್: ಉಡುಪಿಯ ಸನ್ನಿಧಿ ಪ್ರಥಮ
Update: 2022-02-02 14:29 GMT
ಉಡುಪಿ, ಫೆ.2: ಇತ್ತೀಚೆಗೆ ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ನಡೆದ 6ನೇ ರಾಷ್ಟ್ರ ಮಟ್ಟದ ಯೋಗ ಚಾಂಪಿಯನ್‌ಶಿಪ್‌ನಲ್ಲಿ ಉಡುಪಿಯ ಸನ್ನಿಧಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಎರ್ಮಾಳ್ ವಿದ್ಯಾ ಪ್ರಭೋದಿನಿ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಸನ್ನಿಧಿ, ಉಡುಪಿ ಗರ್ಡೆ ಲಕ್ಷ್ಮೀನಗರದ ಶಾರದಾ ಮತ್ತು ರವೀಂದ್ರ ಶೆಟ್ಟಿಗಾರ್ ದಂಪತಿಯ ಪುತ್ರಿ. ಸನ್ನಿಧಿ ತಮ್ಮ 6ನೇ ವಯಸ್ಸಿನಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ್ದಾರೆ.