ಕೊಡವೂರಿನಲ್ಲಿ ‘ಮಾಧವಿ’ ನಾಟಕ ಪ್ರದರ್ಶನ

Update: 2022-02-04 11:11 GMT

ಉಡುಪಿ, ಫೆ.4: ನೃತ್ಯನಿಕೇತನ ಕೊಡವೂರು, ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್, ಮತ್ತು ರಜತೋತ್ಸವ ಸಮಿತಿ ಬ್ರಾಹ್ಮಣ ಮಹಾಸಭಾ ಕೊಡವೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಡಾ. ಶ್ರೀಪಾದ ಭಟ್ ನಿರ್ದೇಶನದ ಸುಧಾ ಆಡುಕಳ ರಚನೆಯ, ಕೈವಲ್ಯ ಕಲಾ ಕೇಂದ್ರದ ಕಲಾವಿದರಾದ ದಿವ್ಯಶ್ರೀ ಕೆ ಮತ್ತು ಶರತ್ ಬೋಪಣ್ಣ ಅಭಿನಯದ ನಾಟಕ ‘ಮಾಧವಿ’ಯ ಪ್ರದರ್ಶನ ಕೊಡವೂರಿನ ವಿಪ್ರಶ್ರೀ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಖ್ಯಾತ ಸಾಹಿತ್ಯ ವಿಮರ್ಶಕ ಹಾಗೂ ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್‌ನ ಪ್ರೊ. ಮುರಳೀಧರ ಉಪಾಧ್ಯಾಯ ಹಿರಿಯಡ್ಕ ಉದ್ಘಾಟಿಸಿದರು. ವೇದಿಕೆಯಲ್ಲಿ ನಾರಾಯಣ ಬಲ್ಲಾಳ್, ಮಂಜುನಾಥ ಭಟ್, ಚಂದ್ರಶೇಖರ್ ರಾವ್, ಸಾಧು ಸಾಲಿಯಾನ್, ಸುಧಾ ಆಡುಕಳ, ನಟರಾದ ದಿವ್ಯಶ್ರೀ ಮತ್ತು ಶರತ್ ಬೋಪಣ್ಣ, ಗಣೇಶ್, ಸುಧೀರ್ ರಾವ್ ಕೊಡವೂರು, ಮಾನಸಿ ಸುಧೀರ್ ಉಪಸ್ಥಿತರಿದ್ದರು.

ವಿದ್ವಾನ್ ಸುಧೀರ್ ರಾವ್ ಕೊಡವೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News