​ಉಡುಪಿ: 175ಕ್ಕೆ ಇಳಿದ ಕೋವಿಡ್ ಪಾಸಿಟಿವ್; ಇಬ್ಬರು ಬಲಿ

Update: 2022-02-06 14:51 GMT

ಉಡುಪಿ, ಫೆ.6: ಉಡುಪಿ ಜಿಲ್ಲೆಯಲ್ಲಿಂದು ಕೋವಿಡ್ ಸೋಂಕು ಪತ್ತೆಯಾ ದವರ ಸಂಖ್ಯೆ 175ಕ್ಕೆ ಇಳಿದರೆ, ರವಿವಾರ ಸಹ ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. 378 ಮಂದಿ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿ ಕೊಂಡರೆ, ಸೋಂಕು ಸಕ್ರಿಯರಾಗಿರುವವರ ಸಂಖ್ಯೆ 1963ಕ್ಕೆ ಇಳಿದಿದೆ.

ಜಿಲ್ಲೆಯಲ್ಲಿ ಕುಂದಾಪುರದ 62 ವರ್ಷ ಪ್ರಾಯದ ಪುರುಷ ಹಾಗೂ ಉಡುಪಿಯ 49ವರ್ಷ ಪ್ರಾಯದ ಪುರುಷ ಮೃತಪಟ್ಟಿದ್ದಾರೆ. ಕೋವಿಡ್ ಸೋಂಕಿನಿಂದ ಕುಂದಾಪುರದ ಪುರುಷ ಕಳೆದ ಫೆ.1ರಂದು ಮನೆಯಲ್ಲೇ ಮೃತಪಟ್ಟಿದ್ದರೆ, ಉಡುಪಿಯ 49 ವರ್ಷ ಪ್ರಾಯದ ವ್ಯಕ್ತಿ ಉಲ್ಬಣಿಸಿದ ಕೋವಿಡ್ ಗುಣಲಕ್ಷಣದಿಂದ ಫೆ.5ರಂದು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಅದೇ ದಿನ ಮೃತಪಟ್ಟಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿ ಯಾದವರ ಸಂಖ್ಯೆ 524ಕ್ಕೇರಿದೆ.

ಇಂದು ಪಾಸಿಟಿವ್ ಬಂದ 175 ಮಂದಿಯಲ್ಲಿ 91 ಮಂದಿ ಪುರುಷರು ಹಾಗೂ 84 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 105 ಮಂದಿ ಉಡುಪಿ ತಾಲೂಕಿಗೆ, 42 ಮಂದಿ ಕುಂದಾಪುರ ಹಾಗೂ 26 ಮಂದಿ ಕಾರ್ಕಳ ತಾಲೂಕಿಗೆ ಸೇರಿದವರು. ಉಳಿದಿಬ್ಬರು ಹೊರಜಿಲ್ಲೆಯವರು. ಪಾಸಿಟಿವ್ ಬಂದವರಲ್ಲಿ 153 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ 102ಕ್ಕಿಳಿದಿದೆ.

ಶನಿವಾರ 378 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಕೊರೋನ ದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 15667ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 2327 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 17,515ಕ್ಕೇರಿದೆ.

155 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 155 ಮಂದಿ ಕೋವಿಡ್ ನಿಯಂತ್ರಣಕ್ಕಿರುವ ಲಸಿಕೆಯನ್ನು ಪಡೆದಿದ್ದಾರೆ.ಇವರಲ್ಲಿ 15 ಮಂದಿ ಮುನ್ನೆಚ್ಚರಿಕೆ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಉಳಿದಂತೆ 45 ಮಂದಿ ಮೊದಲ ಡೋಸ್ ಹಾಗೂ 95 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News