ಶಿರ್ವ: ಫೋಟೋಗ್ರಾಫಿ ಕ್ಲಬ್ ಉದ್ಘಾಟನೆ

Update: 2022-02-09 15:52 GMT

ಶಿರ್ವ, ಫೆ.9: ಶಿರ್ವದ ಸಂತ ಮೇರೀಸ್ ಕಾಲೇಜಿನ ಐಕ್ಯುಎಸಿ ಸಹಯೋಗ ದೊಂದಿಗೆ ಕಾಲೇಜಿನ ಫೋಟೋಗ್ರಾಫಿ ಕ್ಲಬ್‌ನ್ನು ಸೌತ್ ಕೆನರಾ ಫೋಟೋ ಗ್ರಾಫರ್ಸ್‌ ಎಸೋಸಿಯೆಶನ್ ಕಾಪು ವಲಯದ ಅಧ್ಯಕ್ಷ ವಿನೋದ್ ಕಾಂಚನ್ ಉದ್ಘಾಟಿಸಿದರು.

ಫೋಟೋಗ್ರಾಫಿ ಎಂಬುದು ಒಂದು ಸೃಜನಾತ್ಮಕ ಕಲೆ. ಇಂದಿನ ಯುವ ಪೀಳಿಗೆ ಈ ಕಲೆಯನ್ನು ಒಂದು ವ್ಯವಸ್ಥಿತ ರೂಪದಲ್ಲಿ ಕಲಿತು ಬೆಳೆಯಬೇಕೆಂದು ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಹೆರಾಲ್ಡ್ ಐವನ್ ಮೋನಿಸ್ ವಹಿಸಿದ್ದರು. ಫೋಟೋಗ್ರಾಫಿ ಕ್ಷೇತ್ರದಲ್ಲಿ ಈಗ ಸಾಕಷ್ಟು ಅವಕಾಶಗಳಿವೆ. ಈ ಕ್ಷೇತ್ರದಲ್ಲಿ ಆಸಕ್ತಿ ಇರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಾಲೇಜು ಪ್ರೋತ್ಸಾಹ ನೀಡುತ್ತದೆ. ವಿದ್ಯಾರ್ಥಿಗಳು ಅವಕಾಶವನ್ನು ಬಳಸಿಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್.ಕೆ.ಪಿ.ಎ. ಕಾಪು ವಲಯದ ಕಾರ್ಯದರ್ಶಿ ರಾಜೇಶ್ ಹಾಗೂನಿಕಟಪೂರ್ವ ಅಧ್ಯಕ್ಷ ವೀರೇಂದ್ರ ಪೂಜಾರಿ ಉಪಸ್ಥಿತರಿದ್ದರು.

ಫೋಟೋಗ್ರಾಫಿ ಕ್ಲಬ್‌ನ ಸಂಯೋಜಕಿ ಪದ್ಮಾಸಿನಿ ಯು. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಸಂಯೋಜಕ ಶ್ರೀನಾಥ್ ಸ್ವಾಗತಿಸಿದರು. ಮೆಲ್ವಿನ್ ಮಥಾಯಸ್ ಅತಿಥಿಗಳನ್ನು ಪರಿಚಯಿಸಿದರು. ಲಿಯೊನ್ ಮೆಂಡೊನ್ಸಾ ಕಾರ್ಯಕ್ರಮ ನಿರ್ವಹಿಸಿ, ಹರ್ಷಿತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News