ಉಡುಪಿ ಸುಲ್ತಾನ್ ಗೋಲ್ಡ್‌ನಲ್ಲಿ ಡೈಮಂಡ್ ಪ್ರಿವೀವ್ ಉತ್ಸವಕ್ಕೆ ಚಾಲನೆ

Update: 2022-02-13 15:09 GMT

ಉಡುಪಿ, ಫೆ.13: ನಗರದ ವಿಎಸ್‌ಟಿ ರಸ್ತೆಯ ವೆಸ್ಟ್ ಕೋಸ್ಟ್ ಕಟ್ಟಡದಲ್ಲಿರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಶೋರೂಂನಲ್ಲಿ ಫೆ.18ರವರೆಗೆ ಹಮ್ಮಿಕೊಳ್ಳಲಾದ ಡೈಮಂಡ್ ಪ್ರಿವೀವ್ ಉತ್ಸವವನ್ನು ಪೆನಿನ್ಸುಲಾ ಗ್ರಾಂಡ್ ಹೊಟೇಲಿನ ಆಡಳಿತ ನಿರ್ದೇಶಕ ಹಾಗೂ ಚೇಯರ್‌ಮೆನ್ ಕರುಣಾಕರ್ ಆರ್.ಶೆಟ್ಟಿ ರವಿವಾರ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಡೈಮಂಡ್ ಆಭರಣಗಳಾದ ತುರ್ಕಿಸ್ ಸಂಗ್ರಹವನ್ನು ವೈದ್ಯ ಡಾ.ಅನಂತ್ ಎಸ್.ಶೆಣೈ, ಮಿಡ್ಲ್ ಈಸ್ಟ್ ಸಂಗ್ರಹವನ್ನು ಉದ್ಯಮಿ ಎ.ಆರ್.ಬ್ಯಾರಿ, ಸೋಲಿಟೈರ್ ಸಂಗ್ರಹವನ್ನು ಸೂರಿ ಸೀಫುಡ್‌ನ ಅಬ್ದುಲ್ ರಹಿಮಾನ್, ಬೆಲ್ಜಿಯಂ ಸಂಗ್ರಹವನ್ನು ಯಾಸ್ಮೀನ್ ಫೈರೋಝ್ ತೋಟ, ಪ್ರೆಂಚ್ ಸಂಗ್ರಹವನ್ನು ಕತಾರ್ ದೋಹಾ ಗೋಲ್ಡನ್ ಟ್ರೇಡಿಂಗ್ ಆ್ಯಂಡ್ ಡೆಕೋರೇಶನ್‌ನ ಆಡಳಿತ ನಿರ್ದೇಶಕ ಅಸ್ಮತ್ ಅಲಿ, ಯು.ಎಸ್. ಸಂಗ್ರಹವನ್ನು ಬಿಜೆಪಿ ನಾಯಕಿ ವೀಣಾ ಎಸ್. ಶೆಟ್ಟಿ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ವೀಣಾ ಎಸ್.ಶೆಟ್ಟಿ, ಸುಲ್ತಾನ್ ಗೋಲ್ಡ್ ಉಡುಪಿ ನಗರದ ಹೆಗ್ಗುರುತು ಆಗಿದೆ. ಇಲ್ಲಿನ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಚಿನ್ನಾಭರಣಗಳನ್ನು ಒದಗಿಸುವ ಹೆಸರುವಾಸಿಯಾಗಿದೆ. ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರುವಂತಾಗಲಿ ಎಂದು ಶುಭ ಹಾರೈಸಿದರು.

ಸುಲ್ತಾನ್ ಗೋಲ್ಡ್ ಉಡುಪಿ ಬ್ರಾಂಚ್ ಮೆನೇಜರ್ ಮುಹಮ್ಮದ್ ಅಜ್ಮಲ್ ವಂದಿಸಿದರು. ಆಯಿಸ್ಲೆ ಡಿಸೋಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸುಲ್ತಾನ್ ಗ್ರೂಪ್‌ನ ಉಡುಪಿ ಪ್ಲೋರ್ ಮೆನೇಜರ್ ಸಿದ್ದಿಕ್ ಹಸನ್, ಅಸಿಸ್ಟೆಂಟ್ ಸೇಲ್ ಮೆನೇಜರ್‌ಗಳಾದ ಮುಹಮ್ಮದ್ ಶಾಮೀಲ್ ಅಬ್ದುಲ್ ಖಾದರ್, ನಝೀರ್ ಅದ್ದೂರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News