​ಯುವ ಜನತೆಯಲ್ಲಿ ಸಸ್ಯಗಳ ಅರಿವಿನ ಕೊರತೆ: ಪೇಜಾವರ ಸ್ವಾಮೀಜಿ

Update: 2022-02-13 16:45 GMT

ಉಡುಪಿ, ಫೆ.13: ಜೀವವಾಯು ನೀಡುವ ಮೂಲಕ ಮನುಷ್ಯನ ಅಸ್ತಿತ್ವಕ್ಕೆ ಕಾರಣವಾದ ಸಸ್ಯಗಳ ಬಗ್ಗೆ ಇಂದಿನ ಯುವಜನತೆ ಅನಾಸಕ್ತಿ ವಹಿಸಿರುವುದು ಖೇದಕರ ಎಂದು ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ವಿಷಾಧ ವ್ಯಕ್ತಪಡಿಸಿದ್ದಾರೆ.

ರಂಜನಿ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ರವಿವಾರ ಎಂಜಿಎಂ ಗೀತಾಂಜಲಿ ಸಭಾಂಗಣದಲ್ಲಿ ನಡೆದ ಹಿರಿಯ ಸಸ್ಯಶಾಸ್ತ್ರಜ್ಞ ಡಾ.ಕೆ. ಗೋಪಾಲ ಕೃಷ್ಣ ಭಟ್ ಅವರ ಬದುಕು- ಸಾಧನೆ ಕುರಿತ ಪುಸ್ತಕ ‘ಟ್ಯಾಕ್ಸೊನೊಮಿ ಭಟ್ಟರ ಯಾನ’ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಭೂಮಿಯ ಮೇಲೆ ಸಸ್ಯಗಳು, ಪರ್ವತಗಳು, ನದಿ ತೊರೆಗಳು ಇರುವಷ್ಟು ಕಾಲ ಮಾನವ ಬದುಕಿರುತ್ತಾನೆ. ಅವುಗಳ ವಿನಾಃ ಮನುಷ್ಯನ ಬದುಕಿಲ್ಲ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಆಧುನಿಕ ಕಾಲದಲ್ಲಿ ತಮ್ಮ ಐಷಾರಾಮಿ ಜೀವನಕ್ಕೋಸ್ಕರ ಬಹೂಪಯೋಗಿಯಾದ ಸಸ್ಯಗಳ ಹರಣ ನಡೆಯುತ್ತಿರುವುದು ಖಂಡನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರಿನ ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಸಿ. ಆರ್.ನಾಗೇಂದ್ರನ್ ಪುಸ್ತಕ ಬಿಡುಗಡೆಗೊಳಿಸಿದರು. ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ಶ್ರೀರಮಾನಂದ ಗುರೂಜಿ ಶುಭ ಹಾರೈಸಿದರು. ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಪಿ.ಕೆ.ರಾಜಗೋಪಾಲ್ ಮತ್ತು ಡಾ.ಎನ್.ಎ.ಮಧ್ಯಸ್ಥ, ಡಾ.ಗೋಪಾಲಕೃಷ್ಣ ಭಟ್, ಭಾರತಿ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.

ರಂಜನಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಪ್ರೊ. ಅರವಿಂದ ಹೆಬ್ಬಾರ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News