ತೊಕ್ಕೊಟ್ಟು: ಮದುವೆ ಸಮಾರಂಭದಲ್ಲಿ ಯುವತಿಗೆ ಕಿರುಕುಳ ಆರೋಪ; ಮೂವರು ಪೊಲೀಸ್ ವಶಕ್ಕೆ

Update: 2022-02-17 16:21 GMT

ತೊಕ್ಕೊಟ್ಟಿನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಯುವಕನೋರ್ವ ಯುವತಿಗೆ ಚುಡಾಯಿಸಿದ ಎಂಬ ಆರೋಪದ ಹಿನ್ನೆಲೆಯಲ್ಲಿ ಹೊಯ್ ಕೈ ನಡೆದ ಸಂದರ್ಭ ತಡೆಯಲು ಬಂದ ಪೊಲೀಸರ ಮೇಲೂ ಹಲ್ಲೆಗೈದಿದ್ದಾರೆ ಎನ್ನಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ  ಪೊಲೀಸರು ಮೂವರನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

ಘಟನೆಯ ವಿವರ

ತೊಕ್ಕೊಟ್ಟುನಲ್ಲಿರುವ ಖಾಸಗಿ ಸಭಾಂಗಣದಲ್ಲಿ ಗುರುವಾರ ಮಧ್ಯಾಹ್ನ ಮದುವೆ ಸಮಾರಂಭ ನಡೆದಿತ್ತು. ಕೋಟೆಕಾರು ಮಾಡೂರಿನ ವಧು ಮತ್ತು ಕೇರಳ ಕಾಸರಗೋಡಿನ ವರನಿಗೆ ಮದುವೆ ನಡೆದಿತ್ತು. ಮದುವೆ ಸಮಾರಂಭದಲ್ಲಿ ವರನ ಕಡೆಯ ಯುವಕನೋರ್ವ ವಧುವಿನ‌ ಕಡೆಯ ಯುವತಿಯನ್ನು ಚುಡಾಯಿಸಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಿತನಾದ ಯುವತಿಯ ಸಹೋದರ ಚುಡಾಯಿಸಿದವನಿಗೆ ಹಲ್ಲೆ ನಡೆಸಿದ್ದು, ಇದರಿಂದ  ಪರಸ್ಪರ ಯುವಕರ ಗುಂಪಿನ ನಡುವೆ ಹೈಕೈ ನಡೆಯಿತು. ಈ ವೇಳೆ ಉಳ್ಳಾಲ ಉರೂಸ್ ಬಂದೋ ಬಸ್ತಲ್ಲಿದ್ದ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News