ಉಕ್ರೇನ್‌ನಲ್ಲಿರುವ ಉಡುಪಿ ಜಿಲ್ಲೆ ಪ್ರಜೆಗಳ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲು ಡಿಸಿ ಸೂಚನೆ
Update: 2022-02-24 15:30 GMT
ಸೂಚನೆ ಉಡುಪಿ, ಫೆ.24: ರಶ್ಯ ಮತ್ತು ಉಕ್ರೇನ್ ದೇಶಗಳ ನಡುವೆ ಯುದ್ಧದ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲೆಯಿಂದ ಉದ್ಯೋಗ, ವ್ಯಾಪಾರ, ಶಿಕ್ಷಣ ಹಾಗೂ ಇತರ ಉದ್ದೇಶಗಳಿಗೆ ಉಕ್ರೇನ್‌ಗೆ ತೆರಳಿ ಅಲ್ಲಿ ವಾಸವಾಗಿರುವ, ಜಿಲ್ಲೆಗೆ ಸಂಬಂಧಪಟ್ಟ ಭಾರತದ ಪ್ರಜೆಗಳಿದ್ದಲ್ಲಿ, ಅಂಥವರ ಬಗ್ಗೆ ಜಿಲ್ಲಾಡಳಿತದ ವತಿಯಿಂದ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.
ಅಂತಹವರ ಮಾಹಿತಿಗಳನ್ನು ಸಂಬಂಧಿಸಿರುವವರು ಮಣಿಪಾಲದ ರಜತಾದ್ರಿ ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆದಿರುವ ಕಂಟ್ರೋಲ್ ರೂಂ. ಸಂಖ್ಯೆ :1077 ಗೆ ಕರೆ ಮಾಡಿ ಮಾಹಿತಿಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.