ವೆಸ್ಟ್ ಇಂಡೀಸ್‌ನ ಸ್ಪಿನ್ ದಿಗ್ಗಜ ಸನ್ನಿ ರಾಮದಿನ್ ನಿಧನ
ಪೋರ್ಟ್ ಆಫ್ ಸ್ಪೇನ್: ಇಂಗ್ಲೆಂಡ್‌ನಲ್ಲಿ 1950 ರಲ್ಲಿ ಮೊದಲ ವಿದೇಶ ಸರಣಿಯನ್ನು ಗೆದ್ದ ತಂಡದ ಭಾಗವಾಗಿದ್ದ ವೆಸ್ಟ್ ಇಂಡೀಸ್ ಲೆಜೆಂಡರಿ ಸ್ಪಿನ್ನರ್ ಸನ್ನಿ ರಾಮದಿನ್ ಅವರು 92 ನೇ ವಯಸ್ಸಿನಲ್ಲಿ ನಿಧನರಾದರು ಎಂದು ದೇಶದ ಕ್ರಿಕೆಟ್ ಮಂಡಳಿ ತಿಳಿಸಿದೆ.
1950 ರಲ್ಲಿ ಓಲ್ಡ್ ಟ್ರಾಫರ್ಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ನಂತರ ರಾಮದಿನ್ 43 ಟೆಸ್ಟ್‌ಗಳನ್ನು ಆಡಿದರು ಹಾಗೂ 28.98 ಸರಾಸರಿಯಲ್ಲಿ 158 ವಿಕೆಟ್‌ಗಳನ್ನು ಪಡೆದರು.
ವಿಶ್ವ ಕ್ರಿಕೆಟ್ ಮೈದಾನಕ್ಕೆ ಮೊದಲ ಬಾರಿಗೆ ಕಾಲಿಟ್ಟ ಕ್ಷಣದಿಂದ ರಾಮದಿನ್ ಪ್ರಭಾವ ಬೀರಿದರು. 1950 ರ ಕ್ರಿಕೆಟ್ ಪ್ರವಾಸದಲ್ಲಿ ಅವರು ಆಲ್ಫ್ ವ್ಯಾಲೆಂಟೈನ್ ಜೊತೆಗೂಡಿ ಇಂಗ್ಲೆಂಡ್ ಅನ್ನು ಅದರದೆ ನೆಲದಲ್ಲಿ ಮೊದಲ ಬಾರಿ ಸೋಲಿಸಲು ವೆಸ್ಟ್ ಇಂಡೀಸ್ ತಂಡಕ್ಕೆ ನೆರವಾಗಿದ್ದರು. ಇದು ವಿಂಡೀಸ್ ವಿದೇಶಿ ನೆಲದಲ್ಲಿ ದಾಖಲಿಸಿದ ಮೊದಲ ಗೆಲುವಾಗಿತ್ತು.
72 ವರ್ಷಗಳ ಹಿಂದೆ ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ಇಂಡೀಸ್ ಮೊದಲ ಟೆಸ್ಟ್ ಜಯ ಸಾಧಿಸಿದಾಗ 152 ರನ್ ವೆಚ್ಚಕ್ಕೆ 11 ವಿಕೆಟ್ ಗಳನ್ನು ಉರುಳಿಸಿದ್ದರು.