ಉಡುಪಿ ಜಿಲ್ಲೆಯ ಮೂವರಲ್ಲಿ ಕೊರೋನ ಪಾಸಿಟಿವ್ ದೃಢ

Update: 2022-02-28 15:14 GMT

ಉಡುಪಿ, ಫೆ.28: ಜಿಲ್ಲೆಯಲ್ಲಿ ಸೋಮವಾರ ಕೇವಲ ಮೂವರಲ್ಲಿ ಮಾತ್ರ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇಂದು 15 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಸದ್ಯ ಜಿಲ್ಲೆಯಲ್ಲಿ ಚಿಕಿತ್ಸೆಯಲ್ಲಿರುವವರ ಸಂಖ್ಯೆ 83ಕ್ಕಿಳಿದಿದೆ.

ಇಂದು ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಇವರಲ್ಲಿ ಇಬ್ಬರು ಉಡುಪಿ ತಾಲೂಕಿಗೆ ಹಾಗೂ ಇನ್ನೊಬ್ಬರು ಕುಂದಾಪುರ ತಾಲೂಕಿಗೆ ಸೇರಿದವರು. ಇವರಲ್ಲಿ ಇಬ್ಬರನ್ನು ಕೋವಿಡ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರೆ, ಒಬ್ಬರು ಮನೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಸದ್ಯ ಜಿಲ್ಲೆಯಲ್ಲಿ 12 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದು, ಇವರಲ್ಲಿ ಇಬ್ಬರು ವೆಂಟಿಲೇಟರ್ ಹಾಗೂ ಐವರು ಐಸಿಯುನಲ್ಲಿದ್ದಾರೆ.

ಸೋಮವಾರ 15 ಮಂದಿ ರೋಗಮುಕ್ತರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 18400ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 760 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 18,392ಕ್ಕೇರಿದೆ.

1530 ಮಂದಿಗೆ ಲಸಿಕೆ : ಜಿಲ್ಲೆಯಲ್ಲಿ ಇಂದು ಒಟ್ಟು 1530 ಮಂದಿ ಕೋವಿಡ್‌ಗಿರುವ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 148 ಮಂದಿ ಹಿರಿಯ ನಾಗರಿಕರು ಸೇರಿದಂತೆ ಒಟ್ಟು 176 ಮಂದಿ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಉಳಿದಂತೆ 33 ಮಂದಿ ಮೊದಲ ಡೋಸ್ ಹಾಗೂ 1321 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15ರಿಂದ 18 ವರ್ಷ ದೊಳಗಿನ 13 ಮಂದಿ ಮೊದಲ ಡೋಸ್ ಹಾಗೂ 768 ಮಂದಿ ಎರಡನೇ ಡೋಸ್‌ನ್ನು ಇಂದು ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News