ಮುಂಡ್ಕೂರು: ವಿದ್ಯಾವರ್ದಕ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾಟ

Update: 2024-09-06 15:49 GMT

ಕಾರ್ಕಳ: ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಸೌಹಾರ್ದತೆಗಾಗಿ ಕ್ರೀಡೆ ಮುಖ್ಯವಾಗಿದೆ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿ ತೊಡಿಸಿಕೊಳ್ಳಬೇಕು ಎಂದು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಬಾಲಕೃಷ್ಣ ಆಳ್ವ ಹೇಳಿದರು. ಅವರು ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಹಾಗೂ ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಜಂಟಿ ಆಶಯದಲ್ಲಿ ತಾಲೂಕು ಮಟ್ಟದ ಪಿ.ಯು.ಸಿ ವಿಭಾಗದ ಬಾಲಕ, ಬಾಲಕಿಯರ ಕಬ್ಬಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮ ಪಂಚಾಯತಿ ಅಧ್ಯಕ್ಷ ದೇವಪ್ಪ ಸಪಲಿಗ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಡ್ಕೂರು ಶಿಕ್ಷಣ ಹಾಗೂ ಸಮಾಜೋಧ್ಧಾರಕ ಸಂಘದ ಕಾರ್ಯದರ್ಶಿ ಪಾಂಡುರಂಗ ಪ್ರಭು, ನಿವೃತ್ತ ಪ್ರಾಂಶುಪಾಲ ಸುದರ್ಶನ್ ವೈ.ಎಸ್ ಶಾಲಾಆಡಳಿತ ಮಂಡಳಿ ಕೋಶಾಧಿಕಾರಿ ಪ್ರಭಾಕರ ಶೆಟ್ಟಿಗಾರ್, ಆಡಳಿತ ಮಂಡಳಿಯ ಸದಸ್ಯ ಅಶೋಕ್ ಶೆಟ್ಟಿ ಬೆಳ್ಮಣ್ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಸಂತ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶರತ್ ಶೆಟ್ಟಿ,ಕಾಲೇಜಿನ ಪ್ರಾಂಶುಪಾಲ ಮಾಲತೇಶ್ ಇಂಗಳಕಿ ಮುಖ್ಯ ಶಿಕ್ಷಕಿ ಸವಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಮಾಲತೇಶ್ ಇಂಗಳಕಿ ಸಾಗತಿಸಿ ಉಪನ್ಯಾಸಕ ಶಾಂತರಾಮ್ ಧನ್ಯವಾದವಿತ್ತರು. ದೈಹಿಕ ಶಿಕ್ಷಕ ಶರತ್ ರಾವ್ ಕಾರ್ಯಕ್ರಮ ನಿರೂಪಿಸಿದರು.






 


 


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News