ಬುಧವಾರ ಹುಣ್ಣಿಮೆ ಬೆಳದಿಂಗಳು ಹಾಲು ಚೆಲ್ಲಿದಂತೆ: ಡಾ.ಎ.ಪಿ.ಭಟ್
Update: 2024-09-16 15:56 GMT
ಉಡುಪಿ, ಸೆ.16: ಈ ಬಾರಿ ಬುಧವಾರ ಆಕಾಶದಲ್ಲಿ ಕಾಣಿಸಿಕೊಳ್ಳುವ ಹುಣ್ಣಿಮೆ ಚಂದ್ರನ ಬೆಳದಿಂಗಳು ಹಾಲು ಚೆಲ್ಲಿದಂತೆ ಗೋಚರಿಸಲಿದೆ ಎಂದು ಖ್ಯಾತ ಖಗೋಳ ಶಾಸ್ತ್ರಜ್ಞ ಹಾಗೂ ವಿಜ್ಞಾನಿ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.
ಭಾದ್ರಪದದ ಈ ಹುಣ್ಣಿಮೆ ವರ್ಷದ ಅತ್ಯಂತ ಸುಂದರ ಹುಣ್ಣಿಮೆ. ಇದು ಸೂಪರ್ಮೂನ್ ಆಗಿರಲಿದೆ. ಈ ವರ್ಷದ ನಾಲ್ಕು ಸೂಪರ್ ಮೂನ್ ಹುಣ್ಣಿಮೆಗಳಲ್ಲಿ ಈ ತಿಂಗಳಿನ ಸೂಪರ್ಮೂನ್ ಹುಣ್ಣಿಮೆ ಭವ್ಯವಾದುದು ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲಕೂ ಆಗಿರುವ ಡಾ.ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದಕ್ಕೆ ಕಾರಣ, ಚಂದ್ರ ಭೂಮಿಗೆ ಅತೀ ಸಮೀಪ ಅಂದರೆ 3ಲಕ್ಷದ 57 ಸಾವಿರದ 485 ಕಿಮೀಗೆ ಬಂದು ದೊಡ್ಡದಾಗಿ ಹೆಚ್ಚಿನ ಪ್ರಭೆಯಲ್ಲಿ ಗೋಚರಿಸುವನು. ಇದು ಈ ವರ್ಷದಲ್ಲೇ ಅತೀ ಸಮೀಪದಲ್ಲಿ ಸಿಗುವ ಚಂದ್ರದರ್ಶನವಾಗಿದೆ. ಹೀಗಾಗಿ ಬುಧವಾರ ರಾತ್ರಿ ಹುಣ್ಣಿಮೆ ಬೆಳ್ಳಂ ಬೆಳದಿಂಗಳು ಹಾಲು ಚೆಲ್ಲಿದಂತೆ ಗೋಚರಿಸಬಹುದು ಎಂದವರು ಹೇಳಿದ್ದಾರೆ.