ಕೋಟ: ವಾಟ್ಸ್ ಆ್ಯಪ್ ಸ್ಟೇಟಸ್‌ಗೆ ಆಕ್ಷೇಪಿಸಿದಕ್ಕೆ ಜೀವಬೆದರಿಕೆ ಆರೋಪ; ದೂರು
Update: 2022-03-05 17:32 GMT
ಕೋಟ, ಮಾ.5: ಹಿಜಾಬ್ ವಿವಾದ ಸಂಬಂಧ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಅವಹೇಳನಕಾರಿ ಸ್ಟೇಟಸ್ ಹಾಕಿರುವುದನ್ನು ಆಕ್ಷೇಪಿಸಿದಕ್ಕಾಗಿ ಜೀವಬೆದರಿಕೆಯೊಡ್ಡಿದ್ದಾರೆನ್ನಲಾದ ಘಟನೆ ಸಾಲಿಗ್ರಾಮ ಬಸ್ ನಿಲ್ದಾಣದ ಬಳಿ ಮಾ.3 ರಂದು ಮಧ್ಯರಾತ್ರಿ ನಡೆದಿದೆ.
ಸಾಲಿಗ್ರಾಮದ ಪ್ರಜ್ವಲ್(19) ಎಂಬವರ ಸ್ನೇಹಿತನ ತಮ್ಮ ರಿಯಾನ್ ಎಂಬಾತ 15 ದಿನಗಳ ಹಿಂದೆ ತನ್ನ ಮೊಬೈಲ್ ನಲ್ಲಿ ಹಿಜಾಬ್ ವಿವಾದ ಹಾಗೂ ಸಂಘಪರಿವಾರದ ಕಾರ್ಯಕರ್ತರ ಬಗ್ಗೆ ಅವಹೇಳನಕಾರಿ ವಾಟ್ಸ್ ಆ್ಯಪ್ ಸ್ಟೇಟಸ್ನಲ್ಲಿ ಹಾಕಿದ್ದ ಎಂದು ದೂರಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಜ್ವಲ್‌ಗೆ ಕಾರಿನಲ್ಲಿ ಬಂದ ರಿಯಾನ್ ಮತ್ತು ಆತನ ಸ್ನೇಹಿತರು, ತಲವಾರು ತೋರಿಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.