ಸದಸ್ಯತ್ವ ನೋಂದಾವಣಿಯಲ್ಲಿ ಯುವಕರನ್ನು ಮುನ್ನಲೆಗೆ ತನ್ನಿ:ಕೊಡವೂರು

Update: 2022-03-11 15:56 GMT

ಉಡುಪಿ, ಮಾ.11: 2023ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯ ಲಿರುವ ಹಿನ್ನೆಲೆಯಲ್ಲಿ ಸದಸ್ಯತ್ವ ನೋಂದಣಿ ಮೂಲಕ ಯುವ ಪ್ರತಿಭೆಗಳನ್ನು ರಾಜಕೀಯ ಮುನ್ನೆಲೆಗೆ ತರುವಂತಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.

ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜರಗಿದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡುತಿದ್ದರು. ಸದಸ್ಯತ್ವಕ್ಕಾಗಿ ನಡೆಯುತ್ತಿರುವ ಡಿಜಿಟಲ್ ನೋಂದಣಿ ಪಕ್ಷಕ್ಕೆ ಹೊಸ ಆಯಾಮ ವನ್ನು ನೀಡಲಿದ್ದು ಪ್ರಾರಂಭಿಕ ಹಂತದಲ್ಲಿ ಸಮಸ್ಯೆಗಳು ಕಂಡು ಬಂದರೂ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಎಲ್ಲಾ ಬ್ಲಾಕ್‌ಗಳಲ್ಲಿಯೂ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಾಗುವುದು ಎಂದವರು ನುಡಿದರು.

ಭೂಮಸೂದೆ ಕಾಯ್ದೆ ಜಾರಿಯಾಗಿ 50 ವರ್ಷಗಳು ಕಳೆದಿವೆ. ಈ ಮಸೂದೆ ಯ ಫಲಾನುಭವಿಗಳು ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅವರನ್ನು ಗುರುತಿಸುವ ಕಾರ್ಯ ನಡೆಯಬೇಕಾಗಿದೆ. ಹಾಗೆಯೇ ಭೂಮಿಯನ್ನು ಕಳೆದುಕೊಂಡವರನ್ನು ಗುರುತಿಸಿ ಅವರ ಕೊಡುಗೆ ಯನ್ನು ಸ್ಮರಿಸಿಕೊಳ್ಳುವ ಕಾರ್ಯ ಮಾಡಬೇಕು ಎಂದವರು ಹೇಳಿದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಪಕ್ಷದಲ್ಲಿ ಕೆಲಸ ಮಾಡುವ ಪ್ರತಿಯೋರ್ವನಿಗೂ ಅವಕಾಶಗಳು ಬರುತ್ತವೆ. ಆದರೆ ನಾವು ಕಾಯಬೇಕಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ ಕಾರ್ಯಗತಗೊಳಿಸಿದ ಯೋಜನೆ ಗಳಿಂದಾಗಿ ಇಂದು ಸಾವಿರಾರು ಮನೆಗಳು ಬೆಳಗುವಂತಾಗಿದೆ. ಕ್ರಾಂತಿಕಾರಿ ಹೆಜ್ಜೆಗಳಾದ ಭೂಮಸೂದೆ ಹಾಗೂ ಸಿಇಟಿಯಿಂದಾಗಿ ಎಲ್ಲಾ ವರ್ಗಗಳ ಯುವ ಪೀಳಿಗೆ ಇಂದು ಶಿಕ್ಷಣವನ್ನು ಪಡೆದು ಆರ್ಥಿಕವಾಗಿ ಸದೃಡರಾಗಿದ್ದಾರೆ. ಇದನ್ನು ಪ್ರತಿ ಮನೆಮನೆಗೂ ತಲುಪಿಸುವ ಕಾರ್ಯಕ್ರಮ ರೂಪಿಸಿ ಎಂದರು.

ಇತ್ತೀಚಿಗೆ ನಿಧನರಾದ ಪಕ್ಷದ ಮುಖಂಡರಾದ ವಿಠಲ್ ಜಿ. ಕೋಟ್ಯಾನ್, ಗಡಾಹದ್ ರಾಮಕೃಷ್ಣ ರಾವ್ ಕುಂದಾಪುರ, ಸುಭಾಶ್ಚಂದ್ರ ಶೆಟ್ಟಿ ಕುಂದಾಪುರ, ಕಾರ್ಕಳದ ನಿರ್ಮಲ ನಾಯರ್‌ರಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಅಣ್ಣಯ್ಯ ಶೇರಿಗಾರ್ ನುಡಿನಮನ ಸಲ್ಲಿಸಿದರು.

ಸದಸ್ಯತ್ವ ನೋಂದಾವಣೆ ಜಿಲ್ಲಾ ಉಸ್ತುವಾರಿ ಮಮತಾ ಗಟ್ಟಿ ಹಾಗೂ ಡಿಜಿಟಲ್ ಮುಖ್ಯಸ್ಥೆ ಶರ್ಲಿ ಬರ್ನಾಡ್ ಡಿಜಿಟಲ್ ನೊಂದಾವಣೆ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆಕೃಷ್ಣ ಶೆಟ್ಟಿ ಸ್ವಾಗತಿಸಿ,ಪ್ರಧಾನ ಕಾರ್ಯದರ್ಶಿ ವೈ. ಸುಕುಮಾರ್ ವಂದಿಸಿದರು. ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಕಾರ್ಯಕ್ರಮ ನಿರೂಪಿಸಿದರು.

ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರಾದ ಮಂಜುನಾಥ ಪೂಜಾರಿ, ಸದಾಶಿವ ದೇವಾಡಿಗ, ಪ್ರದೀಪ್‌ಕುಮಾರ್ ಶೆಟ್ಟಿ, ಎಸ್. ಮದನ್ ಕುಮಾರ್, ಹೆಚ್. ಹರಿಪ್ರಸಾದ್ ಶೆಟ್ಟಿ, ನವೀನ್‌ಚಂದ್ರ ಸುವರ್ಣ, ಸಂತೋಷ್ ಕುಲಾಲ್, ರಮೇಶ್ ಕಾಂಚನ್, ಮುಖಂಡರಾದ ವೆರೋನಿಕಾ ಕರ್ನೇಲಿಯೋ, ರಾಜು ಪೂಜಾರಿ, ದಿನೇಶ್ ಪುತ್ರನ್, ಬಿ. ಹಿರಿಯಣ್ಣ, ಮಲ್ಯಾಡಿ ಶಿವರಾಮ ಶೆಟ್ಟಿ, ಬಿ. ನರಸಿಂಹ ಮೂರ್ತಿ, ಬಿಪಿನ್‌ಚಂದ್ರ ಪಾಲ್ ನಕ್ರೆ, ಎಂ.ಎಸ್. ಮಹಮ್ಮದ್, ನವೀನ್ ಡಿಸೋಜಾ, ತೇಜಸ್ವಿರಾಜ್, ಅಲೆವೂರು ಹರೀಶ್ ಕಿಣಿ, ಹಬೀಬ್ ಆಲಿ ಖಾದರ್, ವಿಕಾಸ್ ಹೆಗ್ಡೆ, ಶಬ್ಬೀರ್ ಅಹ್ಮದ್, ಪ್ರಖ್ಯಾತ್ ಶೆಟ್ಟಿ, ಕುಶಲ್ ಶೆಟ್ಟಿ, ಸರಸು ಡಿ. ಬಂಗೇರ, ದೇವಾನಂದ ಶೆಟ್ಟಿ, ಕಿಶೋರ್ ಕುಮಾರ್ ಎರ್ಮಾಳ್, ಗೀತಾ ವಾಗ್ಳೆ, ಕೀರ್ತಿ ಶೆಟ್ಟಿ, ಬಾಲಕೃಷ್ಣ ಪೂಜಾರಿ, ಕೆ. ಕೃಷ್ಣಮೂರ್ತಿ ಆಚಾರ್ಯ, ಉದ್ಯಾವರ ನಾಗೇಶ್ ಕುಮಾರ್, ಯತೀಶ್ ಕರ್ಕೇರಾ, ಜ್ಯೋತಿ ಹೆಬ್ಬಾರ್, ರೋಶನಿ ಒಲಿವರ್, ಸೌರಭ್ ಬಲ್ಲಾಳ್, ಶಶಿಧರ ಶೆಟ್ಟಿ ಎಲ್ಲೂರು, ಇಸ್ಮಾಯಿಲ್ ಆತ್ರಾಡಿ, ವೈ. ಗಂಗಾಧರ ಸುವರ್ಣ, ಉಪೇಂದ್ರ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News