ಮಲ್ಪೆ ಬಂದರಿನಲ್ಲಿ ವಾಹನ ಸಹಿತ ಗಾಂಜಾ ವಶ

Update: 2022-03-19 16:41 GMT

ಉಡುಪಿ : ಮಲ್ಪೆ ಬಂದರಿನಲ್ಲಿ ಶುಕ್ರವಾರ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಗಾಂಜಾವನ್ನು ಉಡುಪಿ ಅಬಕಾರಿ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ.

ಬಂದರಿನ ಮೀನು ಹರಾಜು ನಡೆಯುವ ಸ್ಥಳದ ಎದುರಿನ ಮಂಜುಗಡ್ಡೆ ಖಾಲಿ ಮಾಡುವ ಜಾಗದಲ್ಲಿ ವಾಹನದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ದಾಳಿ ನಡೆಸಿದ ತಂಡ, 700 ಗ್ರಾಂ ಗಾಂಜಾ ತುಂಬಿದ ಪ್ಲಾಸ್ಟಿಕ್ ಚೀಲ ಹಾಗೂ ವಾಹನವನ್ನು ವಶಪಡಿಸಿಕೊಂಡಿದೆ. ಇದರ ಮೌಲ್ಯ 6.40 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತೆ ಶೈಲಜಾ ಕೋಟೆ ಹಾಗೂ ಉಡುಪಿಯ ಅಬಕಾರಿ ಉಪ ಆಯುಕ್ತೆ ರೂಪ ಎಂ. ನಿರ್ದೇಶನದ ಮೇರೆಗೆ ಉಡುಪಿ ಉಪ ವಿಭಾಗದ ಅಬಕಾರಿ ಉಪಾಧೀಕ್ಷಕ ಗುರುಮೂರ್ತಿ ಡಿ.ಪಾಲೇಕರ್ ಮಾರ್ಗದರ್ಶನದಂತೆ, ಎನ್‌ಡಿಪಿಎಸ್ ಕಾಯ್ದೆಯಡಿ ಉಡುಪಿ ಉಪ ವಿಭಾಗ ಕಚೇರಿಯ ಅಬಕಾರಿ ನಿರೀಕ್ಷಕಿ ಜ್ಯೋತಿ ಪ್ರಕರಣ ದಾಖಲಿಸಿ ಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ದಾಳಿಯಲ್ಲಿ ಉಡುಪಿ ಉಪವಿಭಾಗದ ಅಬಕಾರಿ ಉಪ ನಿರೀಕ್ಷಕ ರುಬಿಯಾ ನದಾಪ್, ಉಡುಪಿ ವಲಯ-೨ರ ಅಬಕಾರಿ ಉಪ ನಿರೀಖ್ಷಕ ದಿವಾಕರ್ ಹಾಗೂ ಅಬಕಾರಿ ಸಿಬ್ಬಂದಿ ಕೃಷ್ಣ ಆಚಾರಿ, ನಂಜುಂಡಸ್ವಾಮಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News