ಕೋಡಿ: ನಮ್ಮ ನಾಡ ಒಕ್ಕೂಟದಿಂದ ಉಚಿತ ಆಯುಷ್ಮಾನ್ ಕಾರ್ಡ್, ಇ-ಶ್ರಮ್ ಕಾರ್ಡ್ ಶಿಬಿರ

Update: 2022-03-21 10:49 GMT

ಕುಂದಾಪುರ, ಮಾ.21: ನಮ್ಮ ನಾಡ ಒಕ್ಕೂಟದ ಕುಂದಾಪುರ ಘಟಕ ಮತ್ತು ಕರ್ನಾಟಕ ಮುಸ್ಲಿಮ್ ಜಮಾಅತ್ ಕುಂದಾಪುರ ಇವುಗಳ ಜಂಟಿ ಆಶ್ರಯದಲ್ಲಿ ಆಯುಷ್ಮಾನ್ ಕಾರ್ಡ್ ಮತ್ತು ಈ-ಶ್ರಮ್ ಕಾರ್ಡ್ ಶಿಬಿರವು ಕೋಡಿಯ ಎನ್.ಎಂ.ಎ. ಪಾಲಿಕ್ಲಿನಿಕ್ ನಲ್ಲಿ ರವಿವಾರ ಜರುಗಿತು.

ಒಕ್ಕೂಟದ ಕುಂದಾಪುರ ತಾಲೂಕು ಅಧ್ಯಕ್ಷ ದಸ್ತಗೀರ್ ಕಂಡ್ಲೂರ್ ಅಧ್ಯಕ್ಷತೆಯಲ್ಲಿ ನಡೆದ ಶಿಬಿರವು ಕುಂದಾಪುರದ ಗ್ರಾಮೀಣ ಮುಸ್ಲಿಮ್ ಜಮಾಅತ್ ಅಧ್ಯಕ್ಷ ಮುಹಮ್ಮದ್ ನಾಸಿರ್ ನೈನಾರ್ ಅವರ ಕಿರಾಅತ್ ನೊಂದಿಗೆ ಪ್ರಾರಂಭಗೊಂಡಿತು.

ಒಕ್ಕೂಟದ ಉಡುಪಿ ಜಿಲ್ಲಾ ಉಪಾಧ್ಯಕ್ಷ ಅಬು ಮುಹಮ್ಮದ್ ಮಾರ್ಗದರ್ಶನ ನೀಡಿದ್ದರು.

ನಮ್ಮ ನಾಡ ಒಕ್ಕೂಟ ಬೈಂದೂರು ಘಟಕದ ಅಧ್ಯಕ್ಷ ಅಬ್ದುಲ್ ಸಮಿ ಹಳಗೇರಿ ಆಯುಷ್ಮಾನ್ ಕಾರ್ಡ್ ಮತ್ತು ಆಯುಷ್ಮಾನ್ ಕಾರ್ಡ್ ನ ಉಪಯುಕ್ತತೆ ಬಗ್ಗೆ ವಿವರಿಸಿದರು. 

ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿಯ ಸಂಘಟನಾ ಕಾರ್ಯದರ್ಶಿ ಘಟಕದ ಹುಸೈನ್ ಹೈಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕರ್ನಾಟಕ ಮುಸ್ಲಿಮ್ ಜಮಾಅತ್ ಜಿಲ್ಲಾಧ್ಯಕ್ಷ ಮುಹಮ್ಮದ್ ರಫೀಕ್ ಬಿ.ಎಸ್.ಎಫ್., ಕೌನ್ಸಿಲರ್ ಮುಹಮ್ಮದ್ ಅಶ್ಫಾಕ್ ಕೋಡಿ, ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸದಸ್ಯ ಅಬ್ದುಲ್ ಖಾದರ್ ಮೂಡುಗೋಪಾಡಿ ಮತ್ತು ಕೋಡಿ ಜಮಾಅತಿನ ಸದಸ್ಯರು ಉಪಸ್ಥಿತರಿದ್ದರು. 

ಸಹಾದ್ ಬೆಳಪು ಇವರ ತಂಡ ಆಯುಷ್ಮಾನ್ ಕಾರ್ಡ್ ಮಾಡಿಕೊಟ್ಟರು. ಈ-ಶ್ರಮ್ ಕಾರ್ಡ್ ನೌಫಲ್ ಕೋಡಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು. 

ಪಳ್ಳಿ ಉಸ್ಮಾನ್ ಗುಲ್ವಾಡಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಅಬು ಮುಹಮ್ಮದ್ ಕುಂದಾಪುರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News