ಕುರ್ಕಾಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ: ಮಾ. 23ರಂದು ಸಮಾಲೋಚನಾ ಸಭೆ

Update: 2022-03-22 14:30 GMT

ಉಡುಪಿ : ಪಾಪನಾಶಿನಿ ನದಿಗೆ ಕಾಪು ತಾಲೂಕು ಕುರ್ಕಾಲು ನಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ಅನುಷ್ಠಾನ ಗೊಳ್ಳುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಜನರ ಪ್ರತಿರೋಧ ಹೆಚ್ಚುತಿದ್ದು, ಈ ಜನವಿರೋಧಿ, ರೈತ ವಿರೋಧಿ ಯೋಜನೆಯ ವಿರುದ್ಧ ಮುಂದಿನ ಹೋರಾಟದ ರೂಪುರೇಷೆ ರೂಪಿಸಲುು ಮಾ.23 ಬುಧವಾರ ಸಂಜೆ 5 ಗಂಟೆಗೆ ಕುರ್ಕಾಲು ಕಿಂಡಿ ಅಣೆಕಟ್ಟಿನ ವಠಾರದಲ್ಲಿ ಸಮಾಲೋಚನಾ ಸಭೆಯನ್ನು ಏರ್ಪಡಿಸಲಾಗಿದೆ.

ಕಾಪು ಪುರಸಭೆ, ಕಟಪಾಡಿ, ಯೇಣಗುಡ್ಡೆ, ಕುಂಜಾರು, ಸುಭಾಸ್ ನಗರ ಸೇರಿದಂತೆ  ಹಲವು ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಯೋಜನೆ ಇದಾಗಿದ್ದು, ದೀರ್ಘಾವಧಿ ಬಾಳಿಕೆ ಬರಲು ಸಾಧ್ಯವಿರದ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಹೊರಡುವುದರಿಂದ ಜನರ ತೆರಿಗೆ ಹಣವನ್ನು ಕುಡಿಯುವ ನೀರಿನ ಯೋಜನೆ ಹೆಸರಲ್ಲಿ ಪೋಲು ಮಾಡುವುದು ಬಿಟ್ಟು ಬೇರೇನೂ ಸಾಧನೆಯಾಗುವುದಿಲ್ಲ. ಈ ಯೋಜನೆಯ ಅನುಷ್ಠಾನದಿಂದ ಕಿಂಡಿ ಅಣೆಕಟ್ಟಿನ ಆಸುಪಾಸಿನ ಪ್ರದೇಶಗಳ ಜನತೆಗೆ, ಕೃಷಿಕರಿಗೆ ಹೊಸ ಹೊಸ ರೀತಿಯ  ಸಮಸ್ಯೆಗಳು ಉಂಟಾಗಲಿವೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ನಾಳೆ ನಡೆಯುವ ಸಭೆಯಲ್ಲಿ ಉಡುಪಿ ಜಿಲ್ಲಾ ಕೃಷಿಕ ಸಂಘದ ರಾಮಕೃಷ್ಣ ಶರ್ಮ ಬಂಟಕಲ್ಲು, ಶ್ರೀನಿವಾಸ ಭಟ್ ಕುದಿ, ರವೀಂದ್ರ ಗುಜ್ಜರಬೆಟ್ಟು ಪಾಲ್ಗೊಳ್ಳಲ್ಳಿದ್ದಾರೆ. ಮಣಿಪುರ, ಕುರ್ಕಾಲು, ಕುಂಜಾರು  ಪ್ರದೇಶಗಳ ಸಾರ್ವಜನಿ ಕರು, ಕೃಷಿಕರು ಸಭೆಯಲ್ಲಿ ತಪ್ಪದೆ ಭಾಗವಹಿಸುವಂತೆ ಕುರ್ಕಾಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತಡೆೆ ಹೋರಾಟ ಸಮಿತಿಯ ಸಂಚಾಲಕ ರವಿಪೂಜಾರಿ ಕುರ್ಕಾಲು, ಮಣಿರಾಜ್ ಕುರ್ಕಾಲು ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News