ಎ.1ರಿಂದ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

Update: 2022-03-30 14:10 GMT

ಉಡುಪಿ : ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಹಾಗೂ ಆದರ್ಶ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಪ್ರಿವೆನ್ಟೀವ್ ಹೆಲ್ತ್ ಕೇರ್ ಟ್ರೈನಿಂಗ್ ಅಂಡ್ ಚೆಕ್‌ಅಪ್ ಯೋಜನೆಯಡಿ, ಜಿಲ್ಲೆಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಎ.1ರಿಂದ 16ರವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ. 

ಶಿಬಿರದ ವೇಳಾಪಟ್ಟಿ ಹೀಗಿದೆ: ಎ.೧ರಂದು ಕೆರಾಡಿ ಗ್ರಾಪಂನಲ್ಲಿ ಹಳ್ಳಿಹೊಳೆ, ಕೆರಾಡಿ ಹಾಗೂ ಸುತ್ತಮುತ್ತಲಿನವರಿಗೆ ಮತ್ತು ಚಿತ್ತೂರು ಗ್ರಾಪಂನಲ್ಲಿ ವಂಡ್ಸೆ, ಚಿತ್ತೂರು, ಆಲೂರು, ಇಡೂರು, ಕುಂಜ್ಙಾಡಿ ಹಾಗೂ ಸುತ್ತಮುತ್ತಲಿನವರಿಗೆ, ಎ.೨ರಂದು ಕರ್ಕುಂಜೆ ಗ್ರಾಪಂನಲ್ಲಿ ಕರ್ಕುಂಜೆ, ಕಟ್‌ಬೇಲ್ತೂರು ಹಾಗೂ ಸುತ್ತಮುತ್ತಲಿನವರಿಗೆ, ಎ.೩ರಂದು ತಲ್ಲೂರು ಅಂಬೇಡ್ಕರ್ ಸಭಾಭವನದಲ್ಲಿ ತಲ್ಲೂರು ಹಾಗೂ ಸುತ್ತಮುತ್ತಲಿನವರಿಗೆ ಮತ್ತು ಕುಂದಾಪುರ ವಡೇರಹೋಬಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಭವನದಲ್ಲಿ ಕುಂದಾಪುರ, ಹಂಗಳೂರು, ಕೋಡಿ, ಕೋಟೇಶ್ವರ, ಕೋಣಿ ಹಾಗೂ ಸುತ್ತಮುತ್ತಲಿನವರಿಗೆ.

ಎ.೪ರಂದು ಬೆಳ್ವೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಭವನದಲ್ಲಿ ಬೆಳ್ವೆ, ಅಲ್ಬಾಡಿ ಹಾಗೂ ಸುತ್ತಮುತ್ತಲಿನವರಿಗೆ ಮತ್ತು ಅಮಾಸೆಬೈಲು ಗ್ರಾಪಂನಲ್ಲಿ ಶೇಡಿಮನೆ, ಅಮಾಸೆಬೈಲು, ರಟ್ಟಾಡಿ, ಮಡಾಮಕ್ಕಿ ಹಾಗೂ ಸುತ್ತಮುತ್ತಲಿ ನವರಿಗೆ, ಎ.೫ರಂದು ಹೆಮ್ಮಾಡಿ ಗ್ರಾಪಂನಲ್ಲಿ ಹೆಮ್ಮಾಡಿ, ಹಕ್ಲಾಡಿ  ಹಾಗೂ ಸುತ್ತಮುತ್ತಲಿನವರಿಗೆ ಮತ್ತು ಹಾಲಾಡಿ ಗ್ರಾಪಂ ಸಭಾಭವನದಲ್ಲಿ ಹಾಲಾಡಿ, ಹೆಂಗವಳ್ಳಿ ಹಾಗೂ ಸುತ್ತಮುತ್ತಲಿನವರಿಗೆ.

ಎ.೬ರಂದು ಕಾಳಾವರ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಕಾಳಾವರ ಹಾಗೂ ಸುತ್ತಮುತ್ತಲಿನವರಿಗೆ ಮತ್ತು ಹುಣ್ಸೆಮಕ್ಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಮೊಳಹಳ್ಳಿ, ಹಾರ್ದಳ್ಳಿ, ಮಂಡಳ್ಳಿ, ಹೊಂಬಾಡಿ, ಮಂಡಾಡಿ ಹಾಗೂ ಸುತ್ತಮುತ್ತಲಿನವರಿಗೆ ಎ.೭ರಂದು ದೇವಲ್ಕುಂದ ಗಣಪತಿ ಕಟ್ಟೆ ಸಭಾಭವನದಲ್ಲಿ ಕರ್ಕುಂಜೆ, ಕಟ್‌ಬೇಲ್ತೂರು ಹಾಗೂ ಸುತ್ತಮುತ್ತಲಿ ನವರಿಗೆ, ಎ.೯ ಮತ್ತು ೧೦ರಂದು ಯಡ್ತೆರೆ ಪಟ್ಟಣ ಪಂಚಾಯತ್‌ನಲ್ಲಿ ಬೈಂದೂರು, ಪಡುವರಿ, ಯಡ್ತರೆ ಹಾಗೂ ಸುತ್ತಮುತ್ತಲಿನವರಿಗೆ ಮತ್ತು ಮರವಂತೆ ಗ್ರಾಪಂ ಸಭಾಭವನದಲ್ಲಿ ಮರವಂತೆ ಹಾಗೂ ಸುತ್ತಮುತ್ತಲಿನವರಿಗೆ ಆರೋಗ್ಯ ತಪಾಸಣೆ ನಡೆಯಲಿದೆ.

ಎ.೧೧ರಂದು ನಾವುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಡ, ನಾವುಂದ, ಹೆರೂರು ಹಾಗೂ ಸುತ್ತಮುತ್ತಲಿನವರಿಗೆ, ಎ.೧೨ರಂದು ಕಿರಿಮಂಜೇಶ್ವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿರಿಮಂಜೇಶ್ವರ, ಕಂಬದಕೋಣೆ ಹಾಗೂ ಸುತ್ತಮುತ್ತಲಿನವರಿಗೆ ಮತ್ತು ನಾಯ್ಕನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆರ್ಗಾಲ್, ಕಂಬದಕೋಣೆ ಹಾಗೂ ಸುತ್ತ ಮುತ್ತಲಿನವರಿಗೆ, ಎ.೧೩ರಂದು ಉಪ್ಪುಂದ ಶಾಲೆಬಾಗಿಲು ಸರಕಾರಿ ಹಿರಿಯ ಪ್ರಾಥುಕ ಶಾಲೆಯಲ್ಲಿ ಉಪ್ಪುಂದ ಹಾಗೂ ಸುತ್ತಮುತ್ತಲಿನವರಿಗೆ, ಎ.೧೫ರಂದು ಕಂಚಿಕಾನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಜೂರು ಹಾಗೂ ಸುತ್ತಮುತ್ತಲಿನವರಿಗೆ ಮತ್ತು ಗೋಳಿಹೊಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಳಿಹೊಳೆ, ಕಾಲ್ತೋಡು ಹಾಗೂ ಸುತ್ತಮುತ್ತಲಿನವರಿಗೆ ಶಿಬಿರ ನಡೆಯಲಿದೆ.

ಎ.೧೬ರಂದು ಕೊಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಲ್ಲೂರು, ಜಡ್ಕಲ್, ಮೂಡೂರು ಹಾಗೂ ಸುತ್ತಮುತ್ತಲಿನವರಿಗೆ ಮತ್ತು ಶಿರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿರೂರು ಹಾಗೂ ಸುತ್ತಮುತ್ತಲಿನ ಪ್ರದೇಶದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಬೆಳಗ್ಗೆ ೧೦:೩೦ ರಿಂದ ಸಂಜೆ ೬ ಗಂಟೆವರೆಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

ಈ ಶಿಬಿರಗಳಲ್ಲಿ ೧೮ರಿಂದ ೬೦ ವರ್ಷದೊಳಗಿನ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರು, ಕಟ್ಟಡ ಕಾರ್ಮಿಕ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ, ಆಧಾರ್ ಗುರುತಿನ ಚೀಟಿಯ ಜೆರಾಕ್ಸ್ ಹಾಗೂ ರೇಷನ್ ಕಾರ್ಡ್‌ನ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News