ಈ ತಿಂಗಳಲ್ಲಿ ಜಲಧಾರೆ ಯಾತ್ರೆ ಉಡುಪಿಗೆ: ಯೋಗೀಶ್ ಶೆಟ್ಟಿ

Update: 2022-04-05 13:35 GMT

ಉಡುಪಿ, ಎ.೫: ಜೆಡಿಎಸ್ ಪಕ್ಷದ ಜಿಲ್ಲಾ ಸಭೆಯು ಜಿಲ್ಲಾಧ್ಯಕ್ಷ ಯೋಗೀಶ ವಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ಪಕ್ಷದ ಕಚೇರಿ ಕುಮಾರಕೃಪಾದಲ್ಲಿ ಸೋಮವಾರ ಜರಗಿತು.

ಸಭೆಯಲ್ಲಿ ಜನತಾ ಜಲದಾರೆ ರಥ ಯಾತ್ರೆಯ ಬಗ್ಗೆ ಸಭೆಗೆ ಮಾಹಿತಿ ನೀಡಿದ ಯೋಗೀಶ್ ಶೆಟ್ಟಿ, ರಾಜ್ಯದ ನೆಲ-ಜಲದ ಚಿಂತನೆಯೊಂದಿಗೆ ಕುಡಿಯುವ ನೀರು, ನೀರಾವರಿಗೆ ಅಣೆಕಟ್ಟುಗಳನ್ನು ನಿರ್ಮಿಸಿ ರಾಜ್ಯದ ಹಾಗೂ ಉಡುಪಿ ಜಿಲ್ಲೆಯಲ್ಲಿ ನೆನೆಗುಂದಿಗೆ ಬಿದ್ದ ನೀರಾವರಿ ಯೋಜನೆಗಳು ಮತ್ತು ನದಿ ನೀರು ಪಶ್ಚಿಮಕ್ಕೆ ಹರಿದು ಸಮುದ್ರಕ್ಕೆ ಸೇರುವುದನ್ನು ತಡೆದು ಕೃಷಿಗೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವ ನಮ್ಮ ಸರಕಾರದ ಮುಂದಿನ ಕಾಳಜಿ ಇದೆ ಎಂದು ತಿಳಿಸಿದರು.

ನಮ್ಮ ಜಿಲ್ಲೆಗೆ ಜಲಧಾರೆ ಯಾತ್ರೆಯ ವಾಹನವು ಎಪ್ರಿಲ್ ತಿಂಗಳಲ್ಲಿ ಆಗಮಿಸಲಿದ್ದು, ಕಲಶಕ್ಕೆ ವಾರಾಹಿ, ಸೌಪರ್ಣಿಕಾ ನದಿ, ಸೀತಾನದಿ, ಶಾಂಭವಿ ನದಿ, ನೇತ್ರಾವತಿ ನದಿಯ ನೀರನ್ನು ಶೇಖರಿಸಿ, ಬೆಂಗಳೂರು ತಲುಪಿ, ಅರಮನೆ ಮೈದಾನದಲ್ಲಿ ಬೃಹತ್ ಸಭೆ ಜರಗಿದ ನಂತರ, ಜೆಪಿ ಭವನದ ರಾಜ್ಯ ಪಕ್ಷ ಕಚೇರಿಯಲ್ಲಿ ವರ್ಷಪೂರ್ತಿ ಕಲಶಕ್ಕೆ ಪೂಜೆಗಳು ನಡೆಯಲಿದೆ. ಈ ಜಲ ಯಾತ್ರೆಗೆ ಸರ್ವರ ಸಹಕಾರ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ವಾಸುದೇವ ರಾವ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಅಡಿಗ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಕಾರ್ಯಾಧ್ಯಕ್ಷ ಪೂರ್ಣಿಮಾ ನಾಯಕ್ ವಂದಿಸಿದರು.

ಸಭೆಯಲ್ಲಿ ರಾಜ್ಯ ಪದಾಧಿಕಾರಿ ಗಂಗಾಧರ ಬಿರ್ತಿ, ವಿಧಾನಸಭಾ ಕ್ಷೇತ್ರ ಅಧ್ಯಕ್ಷರುಗಳಾದ ಸಂದೇಶ್ ಭಟ್, ಶ್ರೀಕಾಂತ ಹೆಬ್ರಿ, ಬಾಲಕೃಷ್ಣ ಆಚಾರ್ಯ, ಮತ್ತು ಜಿಲ್ಲಾ ಯುವ ಅಧ್ಯಕ್ಷ ಸಂಜಯ ಕುಮಾರ್, ಉದಯ ಶೆಟ್ಟಿ, ರಮೇಶ್ ಕುಂದಾಪುರ, ವೆಂಕಟೇಶ್ ಎಂ.ಟಿ., ಎಸ್.ಪಿ.ಬರ್ಬೊಸ, ಆರ್.ಎನ್. ಕೋಟ್ಯಾನ್, ದೇವರಾಜ ತೊಟ್ಟಂ, ರಾಮರಾವ್, ಬಾಲಚಂದ್ರ ದೇವಾಡಿಗ, ಭರತ್ ಕುಮಾರ್ ಶೆಟ್ಟಿ, ಮಹೇಶ್ ಪರ್ಕಳ, ಸಂಪತ್, ವಿಶಾಲ್, ಆದಿತ್ಯ ಕುಮಾರ್, ಉದಯ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News