ವೆಬ್ ಇಂಡೆಂಟಿಂಗ್ ವ್ಯವಸ್ಥೆ ವಿರೋಧಿಸಿ ಪ್ರತಿಭಟನೆ

Update: 2022-04-06 12:22 GMT

ಕುಂದಾಪುರ : ಈ ತಿಂಗಳಿನಿಂದ ವೆಬ್ ಇಂಡೆಂಟಿಂಗ್ ಮೂಲಕ ಮದ್ಯ ಖರೀದಿಸುವಂತೆ ಕೆಎಸ್‌ಬಿಸಿಎಲ್ ಹೊರಡಿಸಿರುವ ಆದೇಶವನ್ನು ವಿರೋಧಿಸಿ ಕುಂದಾಪುರ ತಾಲೂಕು ವೈನ್ ಮರ್ಚಂಟ್ಸ್ ಅಸೋಸಿಯೇಶನ್ ವತಿಯಿಂದ ಬುಧವಾರ ಕುಂದಾಪುರದ ಕೋಟೇಶ್ವರ ಸಮೀಪವಿರುವ ಕೆ.ಎಸ್.ಬಿ.ಸಿ.ಎಲ್ ಡಿಪೋ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಇದರಿಂದ ತುಂಬಾ ಸಮಸ್ಯೆಗಳು ಉಂಟಾಗಿದ್ದು ಸಾವಿರಾರು ಸನ್ನದುದಾರರು ತೊಂದರೆ ಅನುಭವಿಸುವಂತಾ ಗಿದೆ. ಸಣ್ಣ ಸಣ್ಣ ಬಾರ್ ಹಾಗೂ ವೈನ್ ಶಾಪ್ ಹೊಂದಿರುವವರಿಗೆ ಹೊಸ ವ್ಯವಸ್ಥೆಯಿಂದ ಸಮಸ್ಯೆಗಳಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಮದ್ಯ ಖರೀದಿಗೆ ತೊಡಕಾಗುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಬಹಳಷ್ಟು ಅನಾನುಕೂಲವಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಸನ್ನದುದಾರರ ಹಿತದೃಷ್ಟಿಯಿಂದ ಏಪ್ರಿಲ್ ತಿಂಗಳಾಂತ್ಯದವರೆಗೆ ಹೊಸ ಮತ್ತು ಹಳೆ ಪದ್ಧತಿಯಲ್ಲಿ ಮದ್ಯ ಖರೀದಿಸಲು ಅನುಕೂಲ ಮಾಡಿಕೊಡುವಂತೆ ಎಂದು ಅಸೋಸಿಯೇಶನ್ ಅಧ್ಯಕ್ಷ ರೋಹಿತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ವೈ. ಕರುಣಾಕರ್ ಶೆಟ್ಟಿ, ಉಡುಪಿ ಜಿಲ್ಲಾ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಸಂಚಾಲಕ ಡೇರಿಕ್ ಆಗ್ರಹಿಸಿದರು. ಬಳಿಕ ಈ ಕುರಿತು ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News