ಇಂದ್ರಾಣಿ ನದಿ ಅಂಚಿಗೆ ತಡೆಗೋಡೆ ನಿರ್ಮಿಸಲು ಆಗ್ರಹ

Update: 2022-04-06 12:32 GMT

ಉಡುಪಿ : ಕಲ್ಸಂಕದ ರಾಷ್ಟ್ರೀಯ ಹೆದ್ದಾರಿಯಿಂದ ಶ್ರೀಕೃಷ್ಣ ಮಠದ- ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳಕ್ಕೆ ಸಂಪರ್ಕಿಸುವ ರಸ್ತೆಯಲ್ಲಿರುವ  ಇಂದ್ರಾಣಿ ನದಿಯ ಅಂಚಿಗೆ ತಡೆ ಗೋಡೆ ಅಥವಾ ತಡೆ ಬೇಲಿ ನಿರ್ಮಿಸು ವಂತೆ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಈ ರಸ್ತೆಗೆ ಈಗ ತಡೆಗೋಡೆ ಇಲ್ಲದೆ ಅಪಾಯ ಆಹ್ವಾನಿಸುವ ಸ್ಥಳವಾಗಿ ಮಾರ್ಪಟ್ಟಿದೆ. ಈ ಹಿಂದೆ ಇಲ್ಲಿ ವಾಹನ ಗಳು, ಪಾದಚಾರಿಗಳು ನದಿಗೆ ಉರುಳಿ ಬಿದ್ದಿರುವ ಘಟನೆಗಳು ನಡೆದಿವೆ. ಈ ರಸ್ತೆಯಲ್ಲಿ ಮಠಕ್ಕೆ ಬರುವ ಯಾತ್ರಿಕರ ವಾಹನಗಳ ದಟ್ಟಣೆ ಇರುತ್ತದೆ. ಪಾದಚಾರಿಗಳು ನಡೆದಾಟಕ್ಕೂ ಭೀತಿ ಎದು ರಾಗಿದೆ.

ವಾಹನಗಳು, ಪಾದಚಾರಿಗಳು ಆಯಾತಪ್ಪಿಎಡವಿ ನದಿಗೆ ಬಿಳುವ ಸಾಧ್ಯತೆ ಗಳು ಇಲ್ಲಿವೆ. ಜಿಲ್ಲಾಡಳಿತ, ನಗರಸಭೆ ಇಂದ್ರಾಣಿ ನದಿಯ ಪಕ್ಕದ ರಸ್ತೆಯ ಅಂಚಿನಲ್ಲಿ ತಡೆಗೋಡೆ ನಿರ್ಮಿಸಿ ಸಮಸ್ಯೆ ಪರಿಹರಿಸುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News