ಮಂಗಳೂರು: ಲಿಟ್ ಫೆಸ್ಟ್ ಉದ್ಘಾಟನಾ ಸಮಾರಂಭ

Update: 2022-04-08 12:54 GMT

ಮಂಗಳೂರು : ನಾಲ್ಕನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್  ಅನ್ನು  ಶತಾವಧಾನಿ ಡಾ.ಆರ್ ಗಣೇಶ್ ರವರು ವಿಧ್ಯುಕ್ತವಾಗಿ ಉದ್ಘಾಟಿಸಿದರು.

ಈ ಸಂಧರ್ಭ ಮಿಥಿಕ್ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರಾದ, ವಿ.ಪ್ರಸನ್ನ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಪ್ರಥಮ ಗೋಷ್ಠಿಯನ್ನು ಅಜಕ್ಕಲ ಗಿರೀಶ್ ಭಟ್ ನಡೆಸಿಕೊಟ್ಟರು.ಗೋಷ್ಠಿಯಲ್ಲಿ ಮಾತನಾಡಿದ ಶತಾವಧಾನಿ ಯವರು, ಉಡುಪಿ, ದಕ್ಷಿಣ -ಕನ್ನಡ ಜಿಲ್ಲೆ ನನಗೆ ಸಾಕಷ್ಟು ಪ್ರೇರಣೆ ನೀಡಿದೆ. ಇಲ್ಲಿನ ಕವಿಗಳಿಂದ ಸದಾ ಸ್ಫೂರ್ತಿ ಪಡೆದಿದ್ದೇನೆ. ಇಂತಹ ಸಾಹಿತ್ಯ ಹಬ್ಬ ಆಯೋಜನೆ ಇಂದು ಬಹುಮುಖ್ಯವಾಗಿದೆ. ಇಂಟರ್ನೆಟ್ ಯುಗದಲ್ಲಿ ವೈಯಕ್ತಿಕ ಬಾಂಧವ್ಯ ಕಳೆದುಕೊಂಡಿದ್ದೇವೆ. ಈ ಸಂದರ್ಭದಲ್ಲಿ ಇಂತಹ ಸಾಹಿತ್ಯ ಹಬ್ಬ ಆಯೋಜನೆ ಮಹತ್ವ ದ್ದಾಗಿದೆ. ಕಲೆ, ಸಾಹಿತ್ಯ ಹೀಗೆ ಬೇರೆ ಬೇರೆ ಕ್ಷೇತ್ರದ ಜನ ಒಂದೆಡೆ ಸೇರುವುದರಿಂದ ಸನಾತನತೆಯ ಸಬಲೀಕರಣವಾಗುತ್ತದೆ.

ಸಂಸ್ಕೃತ ಆಡುಭಾಷೆಯಾದಾಗ ಸ್ವಾರಸ್ಯ ಇರುತ್ತದೆ. ಭಾಷೆ ಕಲಿಯದೆ ಮೂಲಗ್ರಂಥಗಳ ಕಲಿಕೆ ಸಾಧ್ಯವಿಲ್ಲ. ವಿಜ್ಞಾನ ಅಂದರೆ ಶಾಸ್ತ್ರ ತರ್ಕ ಶುದ್ಧ ಚಿಂತನೆ ಅತ್ಯಗತ್ಯ. ಸಂಸ್ಕೃತ ಆಡುಭಾಷೆಯಾದಾಗ ಸ್ವಾರಸ್ಯ ಇರುತ್ತದೆ. ಭಾಷೆ ಕಲಿಯದೆ ಮೂಲಗ್ರಂಥಗಳ ಕಲಿಕೆ ಸಾಧ್ಯವಿಲ್ಲ. ವಿಜ್ಞಾನ ಅಂದರೆ ಶಾಸ್ತ್ರ ತರ್ಕ ಶುದ್ಧ ಚಿಂತನೆ ಅತ್ಯಗತ್ಯ ಎಂದರು.

ಸಾಹಿತ್ಯ ದೃಶ್ಯ, ಶ್ರಾವ್ಯ ಶಿಲ್ಪ, ಪ್ರತಿಯೊಂದು ಕಲೆ ಎಲ್ಲದರಲ್ಲೂ ಸಾರ್ವಭೌಮವಾಗಿ ರಸ ಇರಬೇಕು. ಕಲೆಯ ಮೂಲ ಉದ್ದೇಶವೇ ರಸ,ರಸ ಅಂದರೆ ಹೆಚ್ಚಿನ ಅರಿವು, ಅರಿವೇ ಆನಂದ. ಅರಿವು ಆನಂದಗಳಿಗೆ ವ್ಯತ್ಯಾಸವಿಲ್ಲ. ರಸವನ್ನು ನಿರಾಕರಿಸಲು ಮುಖ್ಯ ಕಾರಣ ಭಾವಸಮೃದ್ಧಿ ಇಲ್ಲದೇ ಇರುವುದು. ನವೋದಯದವರಿಗೆ ಬಹುಪಾಂಡಿತ್ಯ ಇತ್ತು. ಆದರೆ ನಂತರದವರಿಗೆ ಅದು ಇಲ್ಲ. ಧ್ವನಿ ಇಲ್ಲದೆ ರಸ ಇಲ್ಲ. ಧ್ವನಿಪೂರ್ಣವಾಗಿ ಶೃಂಗಾರವನ್ನು ಅಭಿವ್ಯಕ್ತ ಮಾಡಬಹುದು.ರಸವೊಂದೇ ಕವಿ ನೀತಿ ಎಂದು ಕುವೆಂಪು ಹೇಳಿದ್ದರು.

ಇಂದು ಕುವೆಂಪು ಅವರನ್ನು ಬೇರೆ ಬೇರೆ ಉದ್ದೇಶಕ್ಕೆ ಬಳಸಲಾಗುತ್ತದೆ. ಶುದ್ಧ ಸಾಹಿತ್ಯವನ್ನು ಎಲ್ಲರಿಗೂ ತಿಳಿಯುವಂತೆ ಮಾಡುವುದು ಇಂದಿನ ಅಗತ್ಯ ಎಂದರು.  ಇದೆ ಸಂದರ್ಭದಲ್ಲಿ  ಪ್ರಶ್ನೆಯೊಂದಕ್ಕೆ ಮಾಹಿತಿ ನೀಡುತ್ತಾ ಜಿಲ್ಲೆಯ ಯಕ್ಷಗಾನ ಕಲೆಯ  ಬಗ್ಗೆ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸಿದರು.

ಅವಧಾನದಲ್ಲಿ ಹಲವಾರು ವರ್ಷಗಳಿಂದ ತಾನು ತೊಡಗಿಸಿಕೊಂಡಿದ್ದರು, 7ಮಂದಿ ಅವಧಾನಿ ಗಳಿದ್ದರು, ಸರಕಾರ, ಅಕಾಡಮಿಗಳು,ವಿಶ್ವವಿದ್ಯಾನಿಲಯಗಳು, ಅಭಿಜಾತ ಕನ್ನಡದ , ಷಟ್ಪದಿ , ಸಾಂಗತ್ಯ ಬಗ್ಗೆ  ಯಾವುದೇ ರೀತಿಯ ಸಂಶೋಧನೆ,ಕಾರ್ಯಕ್ರಮ ಗಳನ್ನು  ನಡೆಸುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News