‘ಕಲ್ಪಿತ ನ್ಯಾಯಾಲಯದ ಅನುಭವ ವಕೀಲ ವೃತ್ತಿ ಜೀವನಕ್ಕೆ ಅವಶ್ಯಕ’

Update: 2022-04-08 14:38 GMT
ಇ.ಎಸ್.ಇಂದಿರೇಶ್

ಉಡುಪಿ : ಕಾನೂನು ವಿದ್ಯಾರ್ಥಿಗಳು ಕಲ್ಪಿತ ನ್ಯಾಯಾಲಯ (ಮೂಟ್‌ಕೋರ್ಟ್) ಸ್ಪರ್ಧೆಯಲ್ಲಿ ಭಾಗವಹಿಸುವು ದರಿಂದ  ನ್ಯಾಯಾಲಯದ ನಿಯಮಗಳು, ಕಾರ್ಯವಿಧಾನಗಳು, ನಡವಳಿಕೆಗಳು, ಸಂಶೋಧನಾ ಕೌಶಲ್ಯ ಗಳನ್ನು ಕಲಿಯಲು ಹಾಗೂ ಪ್ರಾಯೋಗಿಕವಾಗಿ ಯೋಚಿಸಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಹೇಳಿದ್ದಾರೆ. 

ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ೬ನೇ ಅಡ್ವೊಕೇಟ್ ಪಿ.ಶಿವಾಜಿ ಶೆಟ್ಟಿ ಸ್ಮಾರಕ ರಾಷ್ಟ್ರೀಯ ಕಲ್ಪಿತ ನ್ಯಾಯಾಲಯ ಸ್ಪರ್ಧೆ (ಆನ್‌ಲೈನ್)ಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಾನೂನು ಕಲಿತು ವಕೀಲ ವೃತ್ತಿಗೆ ಬರುವ ವಿದ್ಯಾರ್ಥಿಗಳು ಸ್ಪರ್ಧೆಯ ವಾದ ಮಂಡನೆಯ ವೇಳೆ ಪ್ರಕರಣದ ವಸ್ತು ಸ್ಥಿತಿ, ಅದಕ್ಕೆ ಸಂಬಂಧಿಸಿದ ಸಂವಿಧಾನ ಮತ್ತು ಕಾನೂನು ಉಪಬಂಧಗಳು, ನ್ಯಾಯಾಲಯದ ಪೂರ್ವ ನಿರ್ಣಯ ಗಳಿಂದ ಕೂಡಿದ ವಾದ ಮಂಡನೆಯನ್ನು ಮಾಡಬೇಕು. ವಿದ್ಯಾರ್ಥಿಗಳು ವಾದ ಮತ್ತು ಪ್ರತಿವಾದಿ ಎರಡೂ ಕಡೆಯ ವಾದ ಮಂಡನೆಗೆ ಪೂರ್ವ ಸಿದ್ದತೆ ನಡೆಸುವ ಕಾರಣ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಆಯಾಮಗಳ ಬಗ್ಗೆ ಯೋಚಿಸಲು ಸಾದ್ಯವಾಗುತ್ತದೆ. ಇದರಿಂದ ಭಾಷೆಯ ಮೇಲೆ ನಿರರ್ಗಳತೆ ಮತ್ತು ಆತ್ಮವಿಶ್ವಾಸ ಹೆಚ್ಚಲು ಸಹಾಯಕವಾಗುತ್ತದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ.(ಡಾ.)ಪಿ.ಈಶ್ವರ ಭಟ್ ಮಾತನಾಡಿ,  ಕಾನೂನು ಶಿಕ್ಷಣವು ಕಾನೂನು ವೃತ್ತಿ ಜೀವನದ ಒಂದು ತಯಾರಿಯಾ ಗಿದ್ದು ಕಾನೂನಿನ ಅಧ್ಯಯನದಲ್ಲಿ ಶಿಸ್ತು ಅವಶ್ಯಕ. ಉತ್ತಮ ಕಾನೂನು ಶಿಕ್ಷಣವು ಸಮಾಜದ ನ್ಯಾಯದಾನ ವ್ಯವಸ್ಥೆಗೆ ಉತ್ತಮ ಅಡಿಪಾಯ ಒದಗಿಸುತ್ತದೆ. ನ್ಯಾಯಾಲಯಗಳು ಮತ್ತು ವಕೀಲರು ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರಿಗೆ ತಲುಪುವಂತಿರಬೇಕು. ನ್ಯಾಯವನ್ನು ಒದಗಿಸುವುದು ವಕೀಲ ವೃತ್ತಿಯ ಅಂತಿಮ ಉದ್ದೇಶವಾಗಿದ್ದು ಕಾನೂನು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲೆ ಪ್ರೊ.(ಡಾ.) ನಿರ್ಮಲ ಕುಮಾರಿ ಕೆ. ಸ್ವಾಗತಿಸಿ ದರು. ಜಯಂತಿ ಶಿವಾಜಿ ಶೆಟ್ಟಿ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಕಲ್ಪಿತ ನ್ಯಾಯಲಯ ಸೊಸೈಟಿಯ ರಘನಾಥ್ ಕೆ.ಎಸ್. ಕಾರ್ಯಕ್ರಮ  ಸಂಯೋಜಿ ಸಿದರು. ಪ್ರಾಧ್ಯಾಪಕಿ ಸುರೇಖ ಕೆ ವಂದಿಸಿದರು. 

ವಿದ್ಯಾರ್ಥಿನಿಯರಾದ ಪ್ರತ್ಯುಷ, ಕೊಯಲ್ ಅತಿಥಿಗಳನ್ನು ಪರಿಚಯಿಸಿದರೆ, ರೋಚನಿ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದೇಶದ ವಿವಿಧ ಕಾನೂನು ಕಾಲೇಜುಗಳ ೨೦ ತಂಡಗಳು ಭಾಗವಹಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News