ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಶೋ ಉದ್ಘಾಟನೆ

Update: 2022-04-09 13:46 GMT

ಉಡುಪಿ : ಮಲಬಾರ್ ಗೋಲ್ಡ್ ಡೈಮಂಡ್ಸ್ ಉಡುಪಿ ಮಳಿಗೆಯಲ್ಲಿ ಎ.೧೭ರವರೆಗೆ ಹಮ್ಮಿಕೊಳ್ಳಲಾದ ಡೈಮಂಡ್ಸ್ ಶೋ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಶೃತಿ ಜಿ ಶೆಣೈ, ಪ್ರತಿಮಾ ಶೆಟ್ಟಿ, ರೂಪಶ್ರೀ, ಮೇಘಶ್ರೀ, ವಿದ್ಯಾ ಸರಸ್ವತಿ ಶನಿವಾರ ಉದ್ಘಾಟಿಸಿದರು,

ಈ ಪ್ರದರ್ಶನದಲ್ಲಿ ಡೈಮಂಡ್ಸ್ ಜ್ಯುವೆಲ್ಲರಿಯ ಬ್ರೈಡಲ್ ಕಲೆಕ್ಷನ್, ಸಾಲಿಟರ್ ಕಲೆಕ್ಷನ್, ದೈನಂದಿನ ಸಂಗ್ರಹಗಳು, ಸೆರೆಬ್ರೇಶನ್ ನೆಕ್ಲೇಸ್‌ಗಳು, ಪುರುಷರ ಆಭರಣಗಳು ಮತ್ತು ಪ್ಲ್ಯಾಟಿನಮ್ ಜ್ಯುವೆಲ್ಲರಿಗಳ ವಿಲಕ್ಷಣ ಸಂಗ್ರಹ ಇವೆ. 

ಎಲ್ಲಾ ಮೈನ್ ಡೈಮಂಡ್ಸ್ ಜ್ಯುವೆಲ್ಲರಿಗಳನ್ನು ಖರೀದಿಸುವಾಗ ವಜ್ರದ ಮೌಲ್ಯದ ಮೇಲೆ ವಿಶೇಷ ರಿಯಾಯಿತಿ ನೀಡಲಾಗುವುದು. ಎಲ್ಲಾ ಮೈನ್ ಡೈಮಂಡ್ಸ್ ಜ್ಯುವೆಲ್ಲರಿಗಳು ೨೮ ಕ್ವಾಲಿಟಿ ಐಜಿಐ ಪ್ರಮಾಣೀಕರಣವನ್ನು ಹೊಂದಿದ್ದು, ಮೌಲ್ಯವರ್ಧಿತ ಸೇವೆಗಳಾದ ಬೈಬ್ಯಾಕ್ ಗ್ಯಾರಂಟಿ ಮತ್ತು ಆಜೀವ ಉಚಿತ ನಿರ್ವಹಣೆ ಮತ್ತು ಒಂದು ವರ್ಷದ ಉಚಿತ ವಿಮೆಯನ್ನು ಹೊಂದಿದೆ ಎಂದು ಸಂಸ್ಥೆಯ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪುರಂದರ ತಿಂಗಲಾಯ, ರಾಘವೇಂದ್ರ ನಾಯಕ್, ಹರೀಶ್ ಎಂ.ಜಿ., ತಂಝೀಮ್ ಶಿರ್ವ ಹಾಗೂ ಗ್ರಾಹಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿಗ್ನೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News