ಹಸಿವು, ಅರಿವು, ಮರೆವು ಮಾನವರಿಗೆ ದೇವರು ಕೊಟ್ಟ ವರ: ಸಿಎಂ ಬಸವರಾಜ ಬೊಮ್ಮಾಯಿ

Update: 2022-04-11 15:26 GMT

ಉಡುಪಿ : ಹಸಿವು, ಅರಿವು ಮತ್ತು ಮರೆವು ದೇವರು ಮಾನವರಿಗೆ ನೀಡಿದ ಬಹುದೊಡ್ಡ ವರವಾಗಿದೆ. ನಮ್ಮ ಸದ್ಗುಣ ನಮಗೆ ವರವಾಗಿ ಪರಿಣಮಿಸಿದರೆ, ದುರ್ಗುಣಗಳು ನಮಗೆ ಶಾಪವಾಗುತ್ತದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕುಂಜಿಬೆಟ್ಟುವಿನ ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು.  ಹಸಿವು ಅಂದರೆ ನಾವು ಶಾಪ ಎಂದು ಭಾವಿಸಿದ್ದೇವೆ. ಹಸಿವು ಇಲ್ಲದಿದ್ದರೆ ಎಲ್ಲರ ಹೊಟ್ಟೆ ತುಂಬಿರುತ್ತಿದ್ದರೆ ಯಾರು ತಮ್ಮ ಕಾಯಕ, ಕರ್ತವ್ಯ, ಅವಿಷ್ಕಾರ ಮಾಡು ವಂತಹ ಅವಶ್ಯಕತೆ ಇರುತ್ತಿಲ್ಲ. ಮನುಷ್ಯ ಕುಲ ಇಷ್ಟೊಂದು ಅಭಿವೃದ್ಧಿ ಹೊಂದು ತ್ತಿರಲಿಲ್ಲ. ಅದಕ್ಕಾಗಿ ಭಗವಂತ ಹಸಿವು ಎಂಬ ವರವನ್ನು ಕೊಟ್ಟಿದ್ದಾನೆ. ಹಾಗಾಗಿ ಅದು ಶಾಪವಲ್ಲ ಎಂದರು.

ಅರಿವು ಇಲ್ಲದಿದ್ದರೆ ಮನುಷ್ಯ ಮತ್ತು ಪ್ರಾಣಿಗಳಿಗೂ ವ್ಯಾತ್ಯಾಸ ಇರುತ್ತಿರಲಿಲ್ಲ. ಮಾನವ ಅರಿವೇ ಅವನ ಅಸ್ತಿತ್ವ. ಪಾಪ ಪುಣ್ಯ ಎಂಬ ಅರಿವು ದೇವರು ಕೊಟ್ಟ ವರ. ಮರೆವು ಇಲ್ಲದಿದ್ದರೆ ನಾವು ಎಲ್ಲವನ್ನು ನೆನಪು ಇಟ್ಟುಕೊಂಡು ಸಮಾಜ ತುಂಬಾ ಧ್ವೇಷ ಕಟ್ಟಿಕೊಳ್ಳುತ್ತಿದ್ದೇವು. ಮರೆವು ಇರುವುದರಿಂದ ಬದುಕು ಸುಂದರವಾಗಿದೆ ಎಂದು ಅವರು ತಿಳಿಸಿದರು.

ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಸೋದೆಯ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ, ಶಿರೂರು ಶ್ರೀವೇದವರ್ಧನ ತೀರ್ಥ ಸ್ವಾಮೀಜಿ, ಸಚಿವರಾದ  ಸುನಿಲ್ ಕುಮಾರ್, ಎಸ್.ಅಂಗಾರ, ಕೋಟ  ಶ್ರೀನಿವಾಸ ಪೂಜಾರಿ, ಶಾಸಕರಾದ ಲಾಲಾಜಿ ಆರ್.ಮೆಂಡನ್, ರಘುಪತಿ ಭಟ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News