ಸಂತೋಷ್ ಪಾಟೀಲ್‌ ಆತ್ಮಹತ್ಯೆ; ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಆಗ್ರಹ

Update: 2022-04-12 16:01 GMT

ಉಡುಪಿ : ಉಡುಪಿಯಲ್ಲಿ ಸಚಿವ ಈಶ್ವರಪ್ಪನವರ ಮೇಲೆ ೪೦ ಪರ್ಸೆಂಟ್ ಲಂಚದ ಆರೋಪ ಹೊರಿಸಿದ್ದಲ್ಲದೆ ಆ ಆರೋಪಕ್ಕೆ ಸಾಕ್ಷಿಯಾಗಿದ್ದ ಬೆಳಗಾವಿಯ ಸಂತೋಷ್ ಪಾಟೀಲ್‌ರವರು ಜೀವ ಕಳಕೊಳ್ಳುವದರೊಂದಿಗೆ ಸರಕಾರದ ಹೂರಣ ಬಯಲಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿಯು ಆರೋಪಿಸಿದೆ.

ಈ ಮೃತ್ಯುವಿನ ಬಗ್ಗೆ ಪರಸ್ಪರ ವಿರೋಧಾಭಾಸಗಳಿಂದ ಕೂಡಿದ ಸುದ್ದಿಗಳು ರಾಜ್ಯಾದ್ಯಂತ ಹರಿದಾಡಿದೆ. ನಿಜವಾಗಿಯೂ ಇದು ಆತ್ಮಹತ್ಯೆಯೇ ಅಥವಾ ಸಾಕ್ಷಿಗಳನ್ನು ಮುಚ್ಚಿಹಾಕಲಿಕ್ಕಾಗಿ ನಡೆಸಿದ ಕೊಲೆಯೇ ಎಂಬುದರ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನೇತ್ರತ್ವದಲ್ಲಿ ತನಿಖೆ ನಡೆಸಬೇಕು. ಅಲ್ಲಿಯ ತನಕ ಸಚಿವ ಈಶ್ವರಪ್ಪ ನವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಪಕ್ಷದ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News