ಹಿರಿಯ ಅಗ್ರಗಣ್ಯ ಕಲಾವಿದರ ಕಲಾಕೃತಿ ರಚಿಸಿ ಗೌರವ

Update: 2022-04-18 15:09 GMT

ಮಣಿಪಾಲ : ಮಣಿಪಾಲ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ವಿಶ್ವ ಕಲಾ ದಿನಾಚರಣೆಯ ಅಂಗವಾಗಿ ವಿಶ್ವದ ಹಿರಿಯ ಅಗ್ರಗಣ್ಯ ಕಲಾವಿದರ ಕಲಾಕೃತಿ ಯನ್ನು ರಚಿಸಿ, ಹಣತೆಯ ದೀಪದ ಮೂಲಕ ಗೌರವವನ್ನು ಸಲ್ಲಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿಯ ಹಿರಿಯ ಕಲಾವಿದ ಪಿ.ಎನ್.ಆಚಾರ್ಯ ಮಾತನಾಡಿ, ಇಂದಿನ ಕಲಾವಿದ್ಯಾರ್ಜನೆಗೆ ಹಿಂದಿನ ಕಲಾ ವಿದರು ಕೊಟ್ಟ ಕೊಡುಗೆ ಅಪಾರ. ಅಂತಹ ಮಹಾನ್ ವ್ಯಕ್ತಿಗಳ ಕಲಾಕೃತಿಗಳು ಗೌರವಯುತವಾಗಿ ಅನುಕರಿಸಿ, ಚಿತ್ರಿಸಿ ಪ್ರದರ್ಶಿಸುವುದು ಅರ್ಥಪೂರ್ಣ ಎಂದು ತಿಳಿಸಿದರು.

ವೇದಿಕೆಯಲ್ಲಿ ಉಡುಪಿ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ಕಾರ್ಯ ದರ್ಶಿ ಡಾ.ಯು.ಸಿ ನಿರಂಜನ್, ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢ ಶಾಲೆಯ ಅಧ್ಯಕ್ಷ ಎ.ನರಸಿಂಹ ಮಾತನಾಡಿದರು. ಕಲಾವಿದೆ ಶಾಂಭವಿ ರೋಶನ್, ಡಾ. ಜಿ.ಎಸ್.ಕೆ.ಭಟ್, ಕೇಂದ್ರದ ಮಾರ್ಗದರ್ಶಕ ಹರೀಶ್ ಸಾಗಾ ಗಣ್ಯರ ಉಪಸ್ಥಿತಿ ಯಲ್ಲಿ ಕಲಾ ದಿನಾಚರಣೆಯ ಕೇಕ್ ಕತ್ತರಿಸುವ ಮೂಲಕ ಕಲಾ ವಿದ್ಯಾರ್ಥಿ ಯರು ಸಂಭ್ರಮಿಸಿದರು.

ಕಲಾಕೃತಿ ರಚಿಸಿದ 18 ವಿದ್ಯಾರ್ಥಿಯರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಕಲಾವಿದ ಹರೀಶ್ ಸಾಗಾ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News