ಮುಂಬೈ ಇಂಡಿಯನ್ಸ್ ತಂಡದಲ್ಲಿ ಅರ್ಜುನ್ ತೆಂಡುಲ್ಕರ್ ಗೆ ಅವಕಾಶ ನೀಡುವಂತೆ ಅಭಿಮಾನಿಗಳ ಆಗ್ರಹ

Update: 2022-04-21 09:25 GMT
Photo:twitter

ಹೊಸದಿಲ್ಲಿ: ಈಗ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ಗಾಗಿ ಅರ್ಜುನ್ ತೆಂಡುಲ್ಕರ್ ಇನ್ನೂ ಆಡಿಲ್ಲ.  ಆದರೆ,  ಅವರು ಈಗಾಗಲೇ ಸಾಕಷ್ಟು ಗಮನ ಸೆಳೆದಿದ್ದಾರೆ. ಯುವ ಆಟಗಾರ ಅರ್ಜುನ್ ಅವರು ರೋಹಿತ್ ಶರ್ಮಾನೇತೃತ್ವದ ತಂಡದಲ್ಲಿ  ಪಾದಾರ್ಪಣೆ ಮಾಡುವುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

 ಲಕ್ನೊ  ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕಿಂತ ಮೊದಲು ಮುಂಬೈ ಇಂಡಿಯನ್ಸ್ ಅರ್ಜುನ್ ಅವರ ಫೋಟೋವನ್ನು ಪೋಸ್ಟ್  ಮಾಡಿತ್ತು.ಆಗ ಅರ್ಜುನ್ ಅವರು ತಮ್ಮ ಮೊದಲ ಪಂದ್ಯವನ್ನು ಆಡಬಹುದು ಎಂದು ಅಭಿಮಾನಿಗಳು ಊಹಿಸಲಾರಂಭಿಸಿದರು. ಆದರೆ, ಹಾಗಾಗಲಿಲ್ಲ. ಆದರೆ ಫ್ರಾಂಚೈಸಿ ಹಂಚಿಕೊಂಡ ಇತ್ತೀಚಿನ ವೀಡಿಯೊದಲ್ಲಿ, ಅರ್ಜುನ್ ತೆಂಡುಲ್ಕರ್ ಅವರು ಪರಿಪೂರ್ಣ ಯಾರ್ಕರ್ ಮೂಲಕ ಇಶಾನ್ ಕಿಶನ್ ಅವರನ್ನುಕ್ಲೀನ್ ಬೌಲ್ಡ್ ಮಾಡಿದ್ದಾರೆ.

ಕಾಮೆಂಟ್‌ಗಳ ವಿಭಾಗದಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅರ್ಜುನ್ ಅವರನ್ನು ಸೇರಿಸಿಕೊಳ್ಳುವಂತೆ ಅಭಿಮಾನಿಗಳು ಆಗ್ರಹಿಸಿದ್ದಾರೆ.

ಅರ್ಜುನ್ ತೆಂಡುಲ್ಕರ್ ಅವರು ಮೊದಲು ಮುಂಬೈ ಇಂಡಿಯನ್ಸ್‌ನೊಂದಿಗೆ ನೆಟ್ ಬೌಲರ್ ಆಗಿದ್ದರು.  ನಂತರ ಅವರನ್ನು 2021 ರ ಐಪಿಎಲ್ ಆವೃತ್ತಿಗಿಂತ ಮೊದಲು  ಫ್ರಾಂಚೈಸಿ ಅವರನ್ನು ಖರೀದಿಸಿತ್ತು.

ಕಳೆದ ಋತುವಿನಲ್ಲಿ ಅವರು ಒಂದೇ ಒಂದು ಪಂದ್ಯವನ್ನು ಆಡಲಿಲ್ಲ ಹಾಗೂ ಈಗ  ನಡೆಯುತ್ತಿರುವ ಐಪಿಎಲ್‌ಗೆ ಮುನ್ನ ನಡೆದ ಮೆಗಾ ಹರಾಜಿನಲ್ಲಿ ಅವರನ್ನು ಮತ್ತೆ ಮುಂಬೈ ಇಂಡಿಯನ್ಸ್ ರೂ. 30 ಲಕ್ಷಕ್ಕೆ ತೆಗೆದುಕೊಂಡಿತು.

ಸತತ ಆರು ಸೋಲುಗಳನ್ನು ಅನುಭವಿಸಿರುವ ಮುಂಬೈ ಇಂಡಿಯನ್ಸ್ ಈ ಋತುವಿನಲ್ಲಿ ಇನ್ನೂ ಒಂದು ಪಂದ್ಯವನ್ನು ಗೆದ್ದಿಲ್ಲ.

ಮುಂಬೈ ತನ್ನ  ಮುಂದಿನ ಪಂದ್ಯದಲ್ಲಿ ಗುರುವಾರ ಸಂಜೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಾಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News