ಮಣಿಪಾಲ: ಪ್ರೊ.ರಾಜೇಂದ್ರ ಚೆನ್ನಿ ‘ವಚನಗಳ ಓದು’ ಕುರಿತು ಉಪನ್ಯಾಸ

Update: 2022-05-04 12:45 GMT

ಉಡುಪಿ : ಕನ್ನಡದ ಪ್ರಸಿದ್ಧ ಲೇಖಕ ಹಾಗೂ ಸಾಂಸ್ಕೃತಿಕ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಅವರು ಮೇ ೫ರ ಗುರುವಾರ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ‘ವಚನಗಳ ಓದು’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಈ ಉಪನ್ಯಾಸ ಕಾರ್ಯಕ್ರಮ ಗುರುವಾರ ಅಪರಾಹ್ನ 3ಗಂಟೆಗೆ ಮಣಿಪಾಲದಲ್ಲಿರುವ  ಪ್ಲಾನೆಟೋರಿಯಂ ಕಟ್ಟಡದ ಸೆಮಿನಾರ್ ಹಾಲ್‌ನಲ್ಲಿ ನಡೆಯಲಿದೆ.

ಪ್ರೊ.ರಾಜೇಂದ್ರಚೆನ್ನಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕ್ಕೋತ್ತರ ಇಂಗ್ಲಿಷ್ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಹಲವಾರು ವಿಮರ್ಶೆ ಮತ್ತು ಇತರ ಸೃಜನಶೀಲ ಸಾಹಿತ್ಯವನ್ನು ಬರೆದಿರುವ ಅವರು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಗಳಿಂದ ಪುರಸ್ಕೃತರು. ಪ್ರಸ್ತುತ ಇವರು ಶಿವಮೊಗ್ಗದ ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ನಿರ್ದೇಶಕರಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News