ಹಿರಿಯ ಐಪಿಎಸ್ ಅಧಿಕಾರಿ ಪಿ. ರವೀಂದ್ರನಾಥ್ ರಾಜೀನಾಮೆ

Update: 2022-05-10 11:31 GMT

ಬೆಂಗಳೂರು: ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ. ಪಿ.ರವೀಂದ್ರನಾಥ್ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಎಸ್‌ಸಿ/ಎಸ್‌ಟಿ ಕೋಟಾದ ಮೂಲಕ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ನಕಲಿ ಪ್ರಮಾಣಪತ್ರಗಳನ್ನು ಪಡೆದಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಂಡಿರುವುದಕ್ಕಾಗಿ ನನ್ನ ವಿರುದ್ಧ ಸರ್ಕಾರದ ಮೇಲೆ ಪ್ರಭಾವ ಬೀರುವ ಕೆಲವು ವ್ಯಕ್ತಿಗಳು ನನ್ನನ್ನು ಗುರಿಯಾಗಿರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು .

'ನಾನು ವರ್ಗಾವಣೆ ನನ್ನ ಮನವಿ ಅಥವಾ ಸಾರ್ವಜನಿಕ ಹಿತಾಸಕ್ತಿಯಿಂದ ಆಗಿಲ್ಲ. ನಾನು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಇದ್ದಾಗ ಕೆಲವೊಂದು ಪ್ರಭಾವಿ ವ್ಯಕ್ತಿಗಳ ಹೆಸರು ಉಲ್ಲೇಖ ಮಾಡಿದ್ದೆ. ಇದರಿಂದಾಗಿ ನನ್ನ ವರ್ಗಾವಣೆಯಾಗಿದೆ' ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

ಈ ಹಿಂದೆ 2008 2014 ಹಾಗೂ 2020 ರಲ್ಲೂ ರಾಜೀನಾಮೆ ಸಲ್ಲಿಸಿದ್ದ ರವೀಂದ್ರನಾಥ್ ಬಳಿಕ ರಾಜೀನಾಮೆ ಹಿಂಪಡೆದಿದ್ದರು

ಇತ್ತೀಚೆಗಷ್ಟೇ ಅವರನ್ನು ರಾಜ್ಯ ಪೊಲೀಸರ ತರಬೇತಿ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News