ಮಹಿಳೆ ನಾಪತ್ತೆ

Update: 2022-05-11 17:02 GMT

ಉಡುಪಿ : ವಿವಾಹ ವಿಚ್ಛೇದನ ಪಡೆದು ಮಾನಸಿಕವಾಗಿ ನೊಂದಿದ್ದ ಸಹನ (23) ಎಂಬ ಮಹಿಳೆ ಎ.19ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.

೫.೪ ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ತುಳು, ಕೊಂಕಣಿ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ವೃತ್ತ ಕಚೇರಿ ದೂ.ಸಂಖ್ಯೆ: ೦೮೨೫೮-೨೩೧೦೮೩, ಮೊ.ನಂ: ೯೪೮೦೮೦೫೪೩೫, ಕಾರ್ಕಳ ಗ್ರಾಮಾಂತರ ಠಾಣೆ ದೂ.ಸಂಖ್ಯೆ: ೦೮೨೫೮-೨೩೨೦೮೩, ೨೩೩೧೦೦, ಮೊ.ನಂ: ೯೪೮೦೮೦೫೪೬೨ಗೆ ಮಾಹಿತಿ ನೀಡುವಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News