ಆಝಾನ್ ಧ್ವನಿವರ್ಧಕ ವಿಚಾರ; ನ್ಯಾಯಾಲಯದ ಆದೇಶ ಪಾಲಿಸಿ

Update: 2022-05-25 12:52 GMT

ಉಡುಪಿ: ಆರಾಧನಾಲಯಗಳ ಪ್ರಾರ್ಥನೆಗಳಲ್ಲಿ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕ ವನ್ನು ಬಳಸುವ ವಿಚಾರವು ವಿವಿಧ ಸಮುದಾಯಗಳ ನಡುವಿನ ಶಾಂತಿ ಸಾಮರಸ್ಯವನ್ನು ಕೆಡಹುವ ಸ್ಥಿತಿಗೆ ತಲುಪ ದಂತೆ ಜಾಗೃತೆ ವಹಿಸಬೇಕೆಂದು ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿ ಸರ್ವ ಧರ್ಮೀಯರಲ್ಲಿ ವಿನಂತಿಸಿದೆ.

ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ, ಉಡುಪಿ ಜಿಲ್ಲಾ ಖಾಝಿ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದರ ನೇತೃತ್ವ ದಲ್ಲಿ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ.ಅಬೂಬಕ್ಕರ್ ನೇಜಾರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಸುನ್ನೀ ಜಂ-ಇಯ್ಯತುಲ್ ಉಲಮಾ ಕೈಗೊಂಡ ನಿರ್ಧಾರಗಳನ್ನು ಪಾಲಿಸಬೇಕೆಂದು ಸರ್ವರಲ್ಲಿ ವಿನಂತಿಸಲಾಯಿತು.

ಧ್ವನಿವರ್ಧಕದ ಬಳಕೆ ಎಲ್ಲಾ ಧರ್ಮೀಯರ ಆರಾಧನಾಲಯಗಳಲ್ಲಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ವ್ಯಾಪಕ ವಾಗಿದ್ದು, ಬಹುತೇಕ ಎಲ್ಲ ಸಮು ದಾಯಗಳು ಇಂತಹ ವಿಷಯಗಳ ಅಗತ್ಯಗಳನ್ನು ಮನಗಂಡು ಪರಸ್ಪರ ಅರ್ಥೈಸಿಕೊಂಡು ಹೊಂದಾಣಿಕೆಯೊಂದಿಗೆ ಮುಂದುವರೆಯುತ್ತಿವೆ. ಈ ಮೂಲಕ ಸಾರ್ವಜನಿಕರು ತೊಂದರೆಗೀಡಾಗುವ ಸನ್ನಿವೇಶಗಳು ಸೃಷ್ಟಿಯಾಗ ದಂತೆ ನ್ಯಾಯಾಲಯಗಳು ಬೇಕಾದ ಮಾರ್ಗಸೂಚಿಗಳನ್ನು ನೀಡಿವೆ. ಇವುಗಳ ನ್ನೆಲ್ಲ ಗಮನದಲ್ಲಿಟ್ಟು, ಆರಾಧನಾಲಯಗಳ ಆಸುಪಾಸಿನಲ್ಲಿರುವ ಸಾರ್ವಜನಿಕರ ಹಿತಾಸಕ್ತಿಯನ್ನು ಪರಿಗಣಿಸಿಕೊಂಡು ಧ್ವನಿವರ್ಧಕವನ್ನು ಬಳಸಬೇಕೆಂದು ಸಭೆಯಲ್ಲಿ ವಿನಂತಿಸಲಾಯಿತು

ಸಭೆಯನ್ನು ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಬಿಎಸ್‌ಎಫ್ ರಫೀಕ್ ಗಂಗೊಳ್ಳಿ ಉದ್ಘಾಟಿಸಿದರು. ಸುಪ್ರೀಂ ಕೋರ್ಟ್ ಹಾಗೂ ಸರಕಾರದ ಸುತ್ತೋಲೆ ಹಾಗೂ ಕರ್ನಾಟಕ ಉಲಮಾ ಒಕ್ಕೂಟದ ತೀರ್ಮಾನದ ಬಗ್ಗೆ ಸಮಗ್ರ ಮಾಹಿತಿಯನ್ನು ಉಡುಪಿ ಜಿಲ್ಲಾ ಸುನ್ನೀ ಸಂಘಟನೆಗಳ ಕಾರ್ಯದರ್ಶಿ ಕೆ.ಎ. ಅಬ್ದುರ‌್ರಹ್ಮಾನ್ ರಝ್ವಿ ಕಲ್ಕಟ್ಟ ವಿವರಿಸಿದರು.

ಮುಸ್ಲಿಂ ಜಮಾಅತ್ ಹಾಗೂ ಸಂಯುಕ್ತ ಜಮಾಅತ್ ಪ್ರಮುಖ ನಾಯಕರು ಭಾಗವಹಿಸಿದ್ದರು. ಮುಸ್ಲಿಂ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ ಮೂಳೂರು ಸ್ವಾಗತಿಸಿದರು. ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ.ಬಾವು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News