ಮಣಿಪಾಲ ಕೆಎಂಸಿ ರಕ್ತ ಕೇಂದ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

Update: 2022-06-07 14:35 GMT

ಮಣಿಪಾಲ, ಜೂ.೭: ಇಂಟರ್‌ನ್ಯಾಶನಲ್ ಸೊಸೈಟಿ ಆಫ್ ಬ್ಲಡ್ ಟಾನ್ಸ್ ಫ್ಯೂಶನ್(ಐಎಸ್‌ಬಿಟಿ)ನ ೩೭ನೇ ಇಂಟರ್‌ನ್ಯಾಶನಲ್ ಕಾಂಗ್ರೆಸ್‌ನ ಉದ್ಘಾ ಟನಾ ಸಮಾರಂಭದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ರಕ್ತ ಕೇಂದ್ರಕ್ಕೆ ಅಭಿವೃದ್ಧಿ ಶೀಲ ರಾಷ್ಟಗಳಿಗೆ ಕೊಡಲ್ಪಡುವ ಇಂಟರ್‌ನ್ಯಾಶನಲ್ ಸೊಸೈಟಿ ಆಫ್ ಬ್ಲಡ್ ಟಾನ್ಸ್‌ಫ್ಯೂಶನ್ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದ ರಕ್ತ ಕೇಂದ್ರದ ನಿರ್ದೇಶಕಿ  ಡಾ.ಶಮೀ ಶಾಸ್ತ್ರಿ, ನಮ್ಮ ಕೇಂದ್ರದ ರಕ್ತ ಸಂಗ್ರಹಣೆ, ಸಂಸ್ಕರಣೆ, ಪರೀಕ್ಷಾ ವಿಧಾನಗಳು ಮತ್ತು ಕೇಂದ್ರದಲ್ಲಿ ಪಾಲಿಸುವ ಗುಣಮಟ್ಟದ ವ್ಯವಸ್ಥೆಯನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗಿದೆ. ಅಲ್ಲದೇ ವಿಭಾಗದ ಶೈಕ್ಷಣಿಕ, ತರಬೇತಿ ಚಟುವಟಿಕೆಗಳು, ಪ್ರಕಟಣೆಗಳು, ಪ್ರಸ್ತುತಿಗಳು, ಪ್ರಾದೇಶಿಕ ಮತ್ತು ಜಾಗತಿಕ ಸಹಯೋಗಗಳು ಮತ್ತು ಸಂಶೋಧನಾ ಚಟುವಟಿಕೆಗಳನ್ನು ಸಹ ಗಣನೆಗೆ ತೆಗೆದುಕೊಂಡು ಈ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಿದರು.

ಈ ಅಂತಾರಾಷ್ಟ್ರೀಯ ಪ್ರಶಸ್ತಿಯು ನಮ್ಮ ಸಂಸ್ಥೆಗೆ ಮತ್ತೊಂದು ಗರಿಯಾಗಿದೆ ಎಂದು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ ಶರತ್ ಕುಮಾರ್ ರಾವ್ ತಿಳಿಸಿದ್ದಾರೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ  ತಂಡವನ್ನು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News