ಮಣಿಪಾಲ: ಜೂ.8ರಂದು ರಾ.ಬ್ಯಾಂಕುಗಳಿಂದ ಬೃಹತ್ ಸಾಲ ಮೇಳ

Update: 2022-06-07 16:29 GMT

ಉಡುಪಿ, ಜೂ. 7: ಆಜಾದಿ ಕಾ ಅಮೃತ್ ಮಹೋತ್ಸವ ಐಕಾನಿಕ್ ವೀಕ್ ಸೆಲೆಬ್ರೇಷನ್ ಅಂಗವಾಗಿ ಉಡುಪಿಯ ಜಿಲ್ಲೆಯ ಅಗ್ರಣಿ ಬ್ಯಾಂಕ್ ಆದ ಕೆನರಾ ಬ್ಯಾಂಕ್ ಭಾರತ ಸರಕಾರ ಹಣಕಾಸು ಇಲಾಖೆಯ ವೀತ್ತಿಯ ಸೇವೆಗಳ ವಿಭಾಗದ  ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ವ್ಯವಹರಿಸುತ್ತಿರುವ ಎಲ್ಲಾ ಹಣಕಾಸು ಸಂಸ್ಥೆಗಳ ಸಹಭಾಗಿತ್ವದಲ್ಲಿ ಜೂ.8ರಂದು ಬೃಹತ್ ಸಾಲ ಸಂಪರ್ಕ ಮೇಳನವನ್ನು ಆಯೋಜಿಸಿದೆ.

ಕಾರ್ಯಕ್ರಮದ ಮೂಲ ಉದ್ದೇಶ ಬ್ಯಾಂಕುಗಳ ಮೂಲಕ ವಿತರಿಸಲಾಗು ತ್ತಿರುವ ವಿವಿಧ ಸಾಲ ಸೌಲಭ್ಯಗಳು ಹಾಗೂ ಭಾರತ ಸರಕಾರದ ಅಭಿವೃದ್ದಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಹಾಗು ಅರಿವು ಮೂಡಿಸುವುದಾಗಿದೆ.

ಮೇಳದಲ್ಲಿ ಜಿಲ್ಲೆಯಲ್ಲಿ ವ್ಯವಹರಿಸುತ್ತಿರುವ ಎಲ್ಲಾ ವಾಣಿಜ್ಯ  ಬ್ಯಾಂಕುಗಳು, ಸಹಕಾರಿ ವಲಯ, ಗ್ರಾಮೀಣ ಬ್ಯಾಂಕ್ ಹಾಗು ಕಿರು ಹಣಕಾಸು ಸಂಸ್ಥೆಗಳ ಒಟ್ಟು 408 ಶಾಖೆಗಳು ಸಕ್ರೀಯವಾಗಿ ಭಾಗವಹಿಸಲಿವೆ. ಮೇಳದಲ್ಲಿ ಮುದ್ರಾ ಯೋಜನೆ, ಪಿಎಂ ಸ್ವನಿಧೀ, ಕಿರು, ಲಘು, ಮದ್ಯಮ ಉದ್ಯಮ ಅಭಿವೃದ್ದಿ ಯೋಜನೆಗಳು, ಕಿಸಾನ ಕ್ರೇಡಿಟ್ ಕಾರ್ಡ್‌ಗಳು, ಕೃಷಿ ಅಭಿವೃದ್ದಿ ಸಾಲಗಳು, ಮನೆ ಸಾಲಗಳು, ಶೈಕ್ಷಣಿಕ ಸಾಲ ಸೌಲಭ್ಯಗಳು, ಸ್ಟಾಂಡಅಫ್, ಸ್ಟಾರ್ಟ್‌ ಅಪ್ ಯೋಜನೆಗಳು ಹಾಗು ಆತ್ಮ ನಿರ್ಬರ ಯೋಜನೆಯ ವಿವಿಧ ಸಾಲ ಸೌಲಭ್ಯ ಗಳನ್ನು ಪ್ರಚಾರ ಪಡಿಸುವದು ಹಾಗು ಅರ್ಹರಿಗೆ ಸಾಲ ಸಂಪರ್ಕ ಮಾಡಿಸುವ ಉದ್ದೇಶ ಹೊಂದಲಾಗಿದೆ.

ಇದರೊಂದಿಗೆ ಸಾಮಾಜಿಕ ವಿಮಾ ಹಾಗು ಪಿಂಚಣಿ ಭದ್ರತಾ ಯೋಜನೆ ವ್ಯಾಪ್ತಿಗೆ ಜಿಲ್ಲೆಯ ಎಲ್ಲ ಅರ್ಹ ನಾಗರಿಕರನ್ನು ಒಳಪಡಿಸಲು ಹೆಚ್ಚಿನ ಮಹತ್ವವನ್ನು ಬ್ಯಾಂಕುಗಳು ನೀಡಿದ್ದು, ಈ ಮೇಳದಲ್ಲಿ ಆದ್ಯತೆ ಮೇರೆಗೆ ಅರ್ಜಿಗಳನ್ನು ಗ್ರಾಹಕರಿಂದ ಪಡೆದು ಪಿಎಂಜೆಜೆಬಿವೈ ಹಾಗು ಪಿಎಂಎಸ್‌ಬಿವೈ ವಿಮಾ ಮತ್ತು ಅಟಲ್ ಪಿಂಚಣಿ ಯೋಜನೆಗೊಳಿಪಡಿಸಲಾಗುವುದು.

ಈ ಸಾಲ ಸಂಪರ್ಕ ಮೇಳದಲ್ಲಿ ಎಲ್ಲಾ ಬ್ಯಾಂಕುಗಳ ಮುಖ್ಯಸ್ಥರು, ಇಲಾಖಾ ಅಧಿಕಾರಿಗಳು ಹಾಗೂ ಗ್ರಾಹಕರು ಭಾಗವಹಿಸಲಿದ್ದಾರೆ. ಜಿಲ್ಲೆಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಬ್ಯಾಂಕುಗಳ ಮೂಲಕ ಕೊಡಲಾಗುವ ಸಾಲ ಸೌಲಭ್ಯಗಳು ಹಾಗು ಸರಕಾರದ ಯೋಜನೆಗಳ ಲಾಭ ಪಡೆಯಬೇಕೆಂದು   ಜಿಲ್ಲಾ ಅಗ್ರಣಿ ಬ್ಯಾಂಕ ವ್ಯವಸ್ಥಾಪಕ ಪಿ. ಎಂ. ಪಿಂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News