ಕೊಂಕಣ ರೈಲ್ವೆ ಮಾರ್ಗದಲ್ಲಿ ಉಡುಪಿಯ ಮಾನ್ಸೂನ್ ವೇಳಾಪಟ್ಟಿ ಪ್ರಕಟ

Update: 2022-06-10 14:38 GMT
ಸಾಂದರ್ಭಿಕ ಚಿತ್ರ

ಉಡುಪಿ : ಕೊಂಕಣ ರೈಲ್ವೆ ಮಾರ್ಗದಲ್ಲಿ ಇಂದಿನಿಂದ ಪ್ರಾರಂಭಗೊಂಡಿರುವ ಮಾನ್ಸೂನ್ ವೇಳಾಪಟ್ಟಿಯಲ್ಲಿ ಉಡುಪಿಗೆ ಆಗಮಿಸುವ ಹಾಗೂ ನಿರ್ಗಮಿಸುವ ರೈಲುಗಳ ಸಮಯವನ್ನು ಕೊಂಕಣ ರೈಲ್ವೆ ಪ್ರಕಟಿಸಿದೆ. ಈ ವೇಳಾ ಪಟ್ಟಿ ಜೂ.10ರಿಂದ ಅಕ್ಟೋಬರ್ 31ರವರೆಗೆ ಜಾರಿಯಲ್ಲಿರುತ್ತದೆ.

ಉಡುಪಿಗೆ ಆಗಮಿಸುವ ಕೆಲವು ಪ್ರಮುಖ ರೈಲುಗಳ ವೇಳಾಪಟ್ಟಿ ಹೀಗಿದೆ. ರೈಲು ನಂ.12133 ದೈನಂದಿನ ಮಂಗಳೂರು ಸೂಪರ್‌ಫಾಸ್ಟ್ (ಸಿಎಸ್‌ಎಂಟಿ- ಮಂಗಳೂರು ಜಂಕ್ಷನ್) ಆಗಮನ ಅಪರಾಹ್ನ 12:48-ನಿರ್ಗಮನ 12:50, 12134 ದೈನಂದಿನ ಮಂಗಳೂರು ಸೂಪರ್‌ಫಾಸ್ಟ್ (ಮಂಗಳೂರು ಜಂಕ್ಷನ್- ಸಿಎಸ್‌ಎಂಟಿ) ಸಂಜೆ 5:56-5:58.

16345 ದೈನಂದಿನ ನೇತ್ರಾವತಿ ಎಕ್ಸ್‌ಪ್ರೆಸ್ (ಎಲ್‌ಟಿಟಿ-ಟಿವಿಸಿ) ರಾತ್ರಿ 3:46-3:48, 16346 ದೈನಂದಿನ ನೇತ್ರಾವತಿ ಎಕ್ಸ್‌ಪ್ರೆಸ್ (ಟಿವಿಸಿ-ಎಲ್‌ಟಿಟಿ) ಮಧ್ಯರಾತ್ರಿ 11:28-11:30, 16595 ದೈನಂದಿನ ಪಂಚಗಂಗಾ ಎಕ್ಸ್‌ಪ್ರೆಸ್ (ಎಸ್‌ಬಿಸಿ-ಕಾರವಾರ) ಮುಂಜಾನೆ 4:35-4:37, 16596 ದೈನಂದಿನ ಪಂಚಗಂಗಾ ಎಕ್ಸ್‌ಪ್ರೆಸ್ (ಕಾರವಾರ-ಎಸ್‌ಬಿಸಿ) ರಾತ್ರಿ 9:06-9:08.

12620 ದೈನಂದಿನ ಮತ್ಸ್ಯಗಂಧ ಎಕ್ಸ್‌ಪ್ರೆಸ್ (ಮಂಗಳೂರು-ಎಲ್‌ಟಿಟಿ) ಅಪರಾಹ್ನ 2:18-2:20, 12169 ದೈನಂದಿನ ಮತ್ಸ್ಯಗಂಧ ಎಕ್ಸ್‌ಪ್ರೆಸ್ (ಎಲ್‌ಟಿಟಿ- ಮಂಗಳೂರು) ಬೆಳಗ್ಗೆ 7:30-7:32, 16516 ಕಾರವಾರ- ಯಶವಂತಪುರ ಎಕ್ಸ್‌ಪ್ರೆಸ್-(ಮಂಗಳವಾರ, ಗುರುವಾರ, ಶನಿವಾರ)- ಬೆಳಗ್ಗೆ 8:38- 8:40, 16515 ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ (ಸೋಮವಾರ, ಬುಧವಾರ, ಶುಕ್ರವಾರ) ಸಂಜೆ 6:00-6:02.

06602 ದೈನಂದಿನ ಮಂಗಳೂರು-ಮಡಂಗಾವ್ ಎಕ್ಸ್‌ಪ್ರೆಸ್ ಬೆಳಗ್ಗೆ 7:37- 7:38, 06601 ದೈನಂದಿನ ಮಡಂಗಾವ್-ಮಂಗಳೂರು ಎಕ್ಸ್‌ಪ್ರೆಸ್ ಸಂಜೆ 6:54-6:55.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News