ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ನೂತನ ಮನೆ ಹಸ್ತಾಂತರ

Update: 2022-06-12 14:29 GMT

ಉಡುಪಿ : ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಾದ ಬಾರ್ಕೂರಿನ ಕೋಟೆಕೆರೆಯ ಶರತ್ ಕುಮಾರ್(ಸಿಎ ವಿದ್ಯಾರ್ಥಿ) ಮತ್ತು ಜ್ಞಾನೇಶ್ ಕುಮಾರ್(ಅಂತಿಮ ಇಂಜೀನಿಯರಿಂಗ್) ಅವರಿಗೆ ಉಡುಪಿಯ ಲೆಕ್ಕ ಪರಿಶೋಧಕ ಸಿಎ ಗಣೇಶ್ ಕಾಂಚನ್‌ರ ಪ್ರಾಯೋಜಕತ್ವದಲ್ಲಿ ನೂತನವಾಗಿ ನಿರ್ಮಿಸಿ ಕೊಡಲಾಯಿತು.

ನೂತನ ಮನೆಯನ್ನು ಗಣೇಶ್ ಕಾಂಚನ್ ಮತ್ತು ಪ್ರಪುಲ್ಲಾ ಜಿ.ಕಾಂಚನ್ ದಂಪತಿ ಜೂ.೧೧ರಂದು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಉದ್ಯಮಿ ಶ್ರೀನಿವಾಸ ಶೆಟ್ಟಿಗಾರ್ ಮಾತನಾಡಿದರು. ಯು.ವಿಶ್ವನಾಥ ಶೆಣೈ, ರಾಜ ಗೋಪಾಲ ಆಚಾರ್ಯ, ತುಳಸೀದಾಸ್ ಕಾಂಚನ್, ವಸಂತ ಕಾಂಚನ್,  ಸಂಸ್ಥೆಯ ಉಪಾಧ್ಯಕ್ಷ ರಾದ ಎಸ್.ವಿ.ಭಟ್, ವಿ.ಜಿ.ಶೆಟ್ಟಿ, ಕೋಶಾಧಿಕಾರಿಗಳಾದ ಮನೋಹರ್ ಕೆ., ಪ್ರೊ.ಕೆ.ಸದಾಶಿವ ರಾವ್ ಉಪಸ್ಥಿತರಿದ್ದರು.

ಸಂಸ್ಥೆಯು ದಾನಿಗಳ ನೆರವಿನಿಂದ ನಿರ್ಮಿಸಿಕೊಟ್ಟ ೨೯ನೇ ಮನೆಯಾಗಿದ್ದು, ಈ ತಿಂಗಳಿನಲ್ಲಿ ಇನ್ನೂ ೬ ಮನೆಗಳು ಉದ್ಘಾಟನೆಗೊಳ್ಳಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ತಿಳಿಸಿದರು. ಪ್ರೊ.ನಾರಾಯಣ ಎಂ.ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News