ಶಿಕ್ಷಿತರಾಗುವ ಜೊತೆಗೆ ಜ್ಞಾನವಂತರಾಗುವುದು ಅಗತ್ಯ: ಆಲ್ವಿನ್ ಆಂದ್ರಾದೆ

Update: 2022-06-12 14:32 GMT

ಉಡುಪಿ: ಇಂದಿನ ಸ್ಪರ್ಧಾಯುಗದಲ್ಲಿ ವಿದ್ಯಾವಂತರಾಗುವ ಜೊತೆಗೆ ಜ್ಞಾನವಂತರೂ ಆಗಬೇಕಾದ ಅನಿವಾ ರ್ಯತೆ ವಿದ್ಯಾರ್ಥಿಗಳಿಗೆ ಇದೆ. ಹಾಗಾಗಿ ಪಠ್ಯ ಪುಸ್ತಕದ ಜತೆಗೆ ಜತೆಗೆ ಇತರ ಪುಸ್ತಕಗಳನ್ನು ಓದುವ ಪರಿಪಾಠ ವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಸರ್ವಾಂಗೀಣ ಬೆಳವಣಿಗೆಗೆ ಸಾಧ್ಯ ಎಂದು ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಲ್ವಿನ್ ಆಂದ್ರಾದೆ ಹೇಳಿದ್ದಾರೆ.

ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಯು.ಎಫ್.ಸಿ. ಪುಸ್ತಕ ಭಂಡಾರದಿಂದ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಿ ಅವರು ಮಾತನಾಡುತಿದ್ದರು.

ವಿದ್ಯಾರ್ಥಿಗಳ ಓದು ತಮ್ಮ ಪಠ್ಯ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿರದೇ ಇತರ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳ ಬೇಕು. ಪಠ್ಯ ಪುಸ್ತಕಗಳು ನಿಮ್ಮನ್ನು ವಿದ್ಯಾವಂತರನ್ನಾಗಿಸಿದರೆ, ಇತರ ಪುಸ್ತಕಗಳು ಜ್ಞಾನವಂತರನ್ನಾಗಿಸುತ್ತದೆ.  ಇಂದಿನ ವಿದ್ಯಾರ್ಥಿಗಳು ಪ್ರಶ್ನಿಸುವ ಗುಣವನ್ನೆ ಮರೆಯುತ್ತಿದ್ದಾರೆ. ನಾವು ಒಂದು ವಿಷಯದ ಬಗ್ಗೆ ಪ್ರಶ್ನಿಸದಿದ್ದರೆ ಆ ವಿಷಯದಲ್ಲಿ ಪರಿಣಿತಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂದರು.

ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಶರತ್ ಕುಮಾರ್ ಶುಭ ಹಾರೈಸಿದರು. ಸಂಸ್ಥೆ ಅಧ್ಯಕ್ಷ ರಿಯಾಝ್ ಪಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತಿಲಕ್‌ರಾಜ್ ಸಾಲ್ಯಾನ್ ವಂದಿಸಿದರು. ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಉದ್ಯಾವರ್ ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ಮತ್ತು ದ್ವಿತೀಯ ಪಿಯುಸಿಯ  ಸುಮಾರು ೧೫೦ ವಿದ್ಯಾರ್ಥಿಗಳು ಬುಕ್ ಬ್ಯಾಂಕಿನ ಫಲಾನುಭವಿ ಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News