ಮಧುವನ: ಜೂ.19ರಂದು ಉದ್ಯೋಗ ಮೇಳ

Update: 2022-06-15 11:40 GMT

ಉಡುಪಿ, ಜೂ.15: ಮಧುವನ ಇಸಿಆರ್ ಕಾಲೇಜಿನಲ್ಲಿ ಜೂ.19ರಂದು ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಆಕಾಶ್ ಎಸ್. ತಿಳಿಸಿದ್ದಾರೆ.ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳದಲ್ಲಿ ವಿನ್‌ಮನ್ ಸಾಫ್ಟ್‌ವೇರ್, ದಿಯಾ ಸಿಸ್ಟಮ್, ಎಕ್ಸಪರ್ಟಾನ್, ಹೊಟೇಲ್ ಉದ್ಯಮ, ಎಫ್‌ಎಂಸಿಜಿ, ಬ್ಯಾಂಕಿಂಗ್ ಮುಂತಾದ 100 ಅಧಿಕ ಕಂಪೆನಿಗಳು ಹಾಗೂ ಸುಮಾರು 2000-3000 ಅಭ್ಯರ್ಥಿಗಳು ಭಾಗವಹಿಸಲಿರುವರು ಎಂದರು.

ಎಸೆಸೆಲ್ಸಿ, ಪಿಯುಸಿ, ಪದವಿ, ಬಿಇ, ಬಿಸಿಎ, ಬಿಎಸ್‌ಸಿ(ಐಟಿ) ಹಾಗೂ ಸ್ನಾತಕೋತ್ತರದಲ್ಲಿ ಎಂಸಿಎ, ಎಂಎಸ್‌ಸಿ(ಕಂಪ್ಯೂಟರ್ ಸೈನ್ಸ್), ಎಂಬಿಎ, ಎಂಕಾಂ ವಿದ್ಯಾಭ್ಯಾಸ ಹೊಂದಿದ ಅಭ್ಯರ್ಥಿಗಳು ತಮ್ಮ ದಾಖಲೆಗಳೊಂದಿಗೆ ಬೆಳಗ್ಗೆ 8.30ಕ್ಕೆ ಹೆಸರನ್ನು ನೋಂದಾಯಿಸಿ, ನೇರ ಸಂದರ್ಶನಕ್ಕೆ ಹಾಜರಾಗ ಬೇಕು ಎಂದು ಅವರು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ನರ್ಸಿಂಗ್ ವಿಭಾಗದ ಪ್ರಾಂಶುಪಾಲ ನಟರಾಜ್ ಕೆ., ಆಡಳಿತಾಧಿಕಾರಿ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News