ಮಣಿಪಾಲ ಕೆಎಂಸಿಗೆ ಗುಣಮಟ್ಟದ ಪ್ರಮಾಣ ಪತ್ರ

Update: 2022-06-17 13:18 GMT

ಮಣಿಪಾಲ : ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಸಿಎಎಚ್‌ಒ - ೩ಎಂ - ಸಿಎಸ್‌ಎಸ್‌ಡಿ -ಎಸಿಇ  ಪ್ರಮಾಣಪತ್ರ ದೊರತಿದೆ. ಆರೋಗ್ಯ ಸೇವೆಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ನಿರಂತರವಾಗಿ ಕಾಯ್ದುಕೊಳ್ಳುವ ಗುರಿ ಯೊಂದಿಗೆ ವಿವಿಧ ಆರೋಗ್ಯನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ಲಾಭೋದ್ದೇಶವಿಲ್ಲದ ಸಂಸ್ಥೆ ಸಿಎಎಚ್‌ಓ, ಗುಣಮಟ್ಟ ಸುಧಾರಣೆಯ ಉಪಕ್ರಮವಾಗಿ ಈ ಜಾಗೃತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. 

ಮಾಹೆ ಮಣಿಪಾಲದ  ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್  ಮತ್ತು ಮಾಹೆ ಮಣಿಪಾಲದ  ಸಹ ಕುಲಪತಿ (ಆರೋಗ್ಯ ಮತ್ತು ದಂತ ವಿಜ್ಞಾನ) ಡಾ.ಪಿ.ಎಲ್.ಎನ್.ಜಿ.ರಾವ್ ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮತ್ತು ಆಸ್ಪತ್ರೆಯ ಸೋಂಕು ನಿಯಂತ್ರಣ ಸಮಿತಿ ಮುಖ್ಯಸ್ಥ  ಡಾ.ಮುರಳೀಧರ ವರ್ಮ ಮತ್ತು ಗುಣಮಟ್ಟ ಅನುಷ್ಠಾನ ಸಲಹೆಗಾರ ಡಾ. ಸುನೀಲ್ ಸಿ.ಮುಂಡ್ಕೂರ್ ಇವರಿಗೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಣಿಪಾಲ ಮಾಹೆಯ ಸಹ ಉಪಕುಲಪತಿ  (ಆರೋಗ್ಯ ವಿಜ್ಞಾನ) ಡಾ. ವೆಂಕಟ್ರಾಯ ಪ್ರಭು, ಕಸ್ತೂರ್ಬಾ ಆಸ್ಪತ್ರೆಯ  ಸಿಒಒ ಸಿ.ಜಿ. ಮುತ್ತಣ್ಣ ಹಾಗೂ ಆಸ್ಪತ್ರೆಯ ಇತರ ನಿರ್ವಹಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News