ಸಾಮಾಜಿಕ ಮಾಧ್ಯಮಗಳಲ್ಲಿ ವಿಫುಲ ಅವಕಾಶ: ಎಂ.ಎಸ್.ರಾಘವೇಂದ್ರ

Update: 2022-06-21 14:05 GMT

ಉಡುಪಿ: ಸಾಮಾಜಿಕ ಮಾಧ್ಯಮದಲ್ಲಿ ಸಮಯವನ್ನು ಕಳೆಯುತ್ತಿ ದ್ದೇವೆ ಹೊರತು ಅದನ್ನು ಯಶಸ್ವಿಯಾಗಿ ಬಳಕೆ ಮಾಡಿಕೊಳ್ಳಲು ವಿಫಲರಾಗುತ್ತಿ ದ್ದೇವೆ ಎಂದು ಪತ್ರಕರ್ತ ಎಂ.ಎಸ್.ರಾಘವೇಂದ್ರ ಹೇಳಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿ ಮತ್ತು ಐ.ಕ್ಯೂ.ಎ.ಸಿ. ಸಹಯೋಗದಲ್ಲಿ ಸೋಮವಾರ ಕಾಲೇಜಿನ ನೂತನ ರವಿಂದ್ರ ಮಂಟಪದಲ್ಲಿ ಜರಗಿದ ‘ನವ ಮಾಧ್ಯಮದಲ್ಲಿ ಹೊಸ ಸಾಧ್ಯತೆಗಳು’ ರಾಜ್ಯಮಟ್ಟದ ಪತ್ರಿಕೋದ್ಯಮ ಕಾರ್ಯಾ ಗಾರದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ನಕರಾತ್ಮಕ ಮತ್ತು ಸಕಾರಾತ್ಮಕವಾಗಿ ಬಳಕೆ ಮಾಡಲು ಸಾಮಾಜಿಕ ಮಾಧ್ಯಮ ಪ್ರಭಲ ಅಸ್ತ್ರವಾಗಿದೆ. ಅದರಿಂದ ಬದುಕು ಕಟ್ಟಿಕೊಳ್ಳಲು, ಬದುಕನ್ನು ಹಾಳು ಮಾಡಿಕೊಳ್ಳಲು ಸಾಧ್ಯವಿದೆ. ಯ್ಯೂಟ್ಯೂಬ್, ಫೇಸ್ಬುಕ್‌ ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ನಮಗೆ ಪ್ರಮುಖ ವೇದಿಕೆಯಾಗಿದೆ. ಇದರಲ್ಲಿ ಚಾನೆಲ್, ಪೇಜ್‌ಗಳನ್ನು ಮಾಡುವ ಮೂಲಕ ಇತಿಹಾಸ, ಪುರಾಣ, ಪ್ರಸ್ತುತ ವಿದ್ಯಮಾನ ಗಳಿಗೆ ಸಂಬಂಧಿಸಿ ಜನರ ಅಭಿರುಚಿಗೆ ತಕ್ಕ ವಿಭಿನ್ನ ಕಂಟೆಂಟ್‌ಗಳನ್ನು ನೀಡ ಬಹುದು. ಜತೆಗೆ ಆದಾಯವನ್ನು ಗಳಿಸುವ ಅವಕಾಶಗಳಿವೆ ಎಂದರು.

ಅಂತರಾಷ್ಟ್ರೀಯ ಮಟ್ಟದ ಪ್ರಮುಖ ವಿದ್ಯಮಾನಗಳು ರಾಜ್ಯದ ಜನರಿಗೆ ಪ್ರಾದೇಶಿಕ ಭಾಷೆಯಲ್ಲಿ ಸುದ್ದಿಗಳು ಸಿಗುತ್ತಿಲ್ಲ. ಟೆಲಿವಿಶನ್ ಮಾಧ್ಯಮಕ್ಕೆ ಬರುವ ಯುವ ಪತ್ರಕರ್ತರು ಅನುವಾದ ಸರಿಯಾಗಿ ಗೊತ್ತಿಲ್ಲದೆ ಈ ರೀತಿ ಸಮಸ್ಯೆ ಗಳಾಗುತ್ತಿದೆ. ಪತ್ರಿಕೋದ್ಯಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಿಂದ ಕನ್ನಡ ಅನುವಾದ ಬಗ್ಗೆ ಹೇಳಿಕೊಡಲು ಮೊದಲ ಪ್ರಾಮುಖ್ಯತೆ ಕೊಡಬೇಕು ಎಂದು ಅವರು ಸಲಹೆ ನೀಡಿದರು.

ಕಲಾವಿದೆ ಮಾನಸಿ ಸುಧೀರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತ್ಯ, ಕಾಪು ಶಟರ್‌ಬಾಕ್ಸ್ ಫಿಲಂಸ್‌ನ ಸಚಿನ್ ಎಸ್.ಶೆಟ್ಟಿ ಕರಾವಳಿಯಲ್ಲುಂಟು ನೂರೆಂಟು ಕಂಟೆಂಟು, ನಿರೂಪಕಿ ಶಮೀರಾ ಬೆಳುವಾಯಿ ನಿರೂಪಣೆ ಆಕಾಶದಷ್ಟು ಅವಕಾಶ, ಹಿನ್ನೆಲೆ ಧ್ವನಿ ಕಲಾವಿದ ಬಡೆಕ್ಕಿಲ ಪ್ರದೀಪ್ ಧ್ವನಿ ಜಗತ್ತಿನ ಧಣಿ ಆಗೋದು ಹೇಗೆ? ಕುರಿತು ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ನಾಯಕ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ್ ಕಾಮತ್ ಉಪಸ್ಥಿತರಿದ್ದರು. ಉಪನ್ಯಾಸಕ ಸುಚಿತ್ ಕೊಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News