ವಿಶ್ವಕರ್ಮ ನಿಗಮಕ್ಕೆ ಅನುದಾನ: ಸಚಿವ ಕೋಟಗೆ ಸನ್ಮಾನ
Update: 2022-07-03 12:48 GMT
ಉಡುಪಿ: ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ೧೫ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಅಭಿನಂದಿಸಿ, ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಇತ್ತೀಚೆಗೆ ಪರ್ಕಳ ಹೆರ್ಗ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಸಚಿವರ ಕಚೇರಿಯಲ್ಲಿ ಸನ್ಮಾನಿಸ ಲಾಯಿತು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಸುಮಿತ್ರ ನಾಯಕ್, ಶ್ರೀವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಹರೀಶ್ ಆಚಾರ್ಯ, ಗೌರವಾಧ್ಯಕ್ಷರಾದ ಭಾಸ್ಕರ ಆಚಾರ್ಯ, ಸುಬ್ರಯಾ ಆಚಾರ್ಯ ಮತ್ತು ರಘುನಾಥ್ ಆಚಾರ್ಯ, ಕಾರ್ಯದರ್ಶಿ ಜಗದೀಶ್ ಆಚಾರ್ಯ, ಕೋಶಾಧಿಕಾರಿ ಗುರುರಾಜ ಆಚಾರ್ಯ, ಸದಸ್ಯರಾದ ಗೋಪಾಲ ಆಚಾರ್ಯ, ಜಯಂತ್ ಆಚಾರ್ಯ, ರತ್ನಾಕರ್ ಆಚಾರ್ಯ ಉಪಸ್ಥಿತರಿದ್ದರು.