ಶಾಲೆಯ ಶಿಥಿಲಾವಸ್ಥೆಯ ಕಟ್ಟಡದ ದುರಸ್ಥಿ, ಅಕ್ರಮ ಕಾರ್ಯಾಚರಿಸುತ್ತಿರುವ ಗ್ಯಾಸ್ ಗೋಡನ್ ತೆರವಿಗಾಗಿ ಉಡುಪಿ ಡಿಸಿಗೆ ದೂರು

Update: 2022-07-05 17:29 GMT

ಉಡುಪಿ: ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ವಾದ ಪಡುಬಿದ್ರಿ ಇದರ ನೇತೃತ್ವದಲ್ಲಿ ಪಡುಬಿದ್ರಿ ಕೆ.ಪಿ.ಎಸ್(ಬೋರ್ಡ್ ಶಾಲೆ) ಶಾಲೆಯ ಶಿಥಿಲಾವಸ್ಥೆಯ ಕಟ್ಟಡದ ದುರಸ್ಥಿ ಹಾಗೂ ಪಡುಬಿದ್ರಿ ಪಾದೆಬೆಟ್ಟು ದಲಿತ ಕಾಲನಿಯಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಗ್ಯಾಸ್ ಗೋಡನ್ ತೆರವಿನ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಯಿತು.

ಈ ಸಂದರ್ಭ ಅಪರ ಜಿಲ್ಲಾಧಿಕಾರಿ ವೀಣಾ.ಜಿ.ಎನ್ ದೂರು ಸ್ವೀಕರಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕೂಡಲೇ ಕರೆ ಮಾಡಿ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು.

ಈ ಸಂದರ್ಭ ಜಿಲ್ಲಾ ಸಂಚಾಲಕರಾದ ಸುಂದರ್ ಮಾಸ್ಟರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಪರಮೇಶ್ವರ್ ಉಪ್ಪುರ್, ಪಡುಬಿದ್ರಿ ಸಂಚಾಲಕ ಸುರೇಶ್ ಪಾದೆಬೆಟ್ಟು, ಸಂಘಟನಾ ಸಂಚಾಲಕ ರಮೇಶ್ ಪಾದೆಬೆಟ್ಟು, ಗೌರವ ಸಲಹೆಗಾರರಾದ ವಿಠ್ಠಲ್ ಮಾಸ್ಟರ್, ಮಹಿಳಾ ಸಂಚಾಲಕಿ ವಸಂತಿ ಕಲ್ಲಟ್ಟೆ, ಕೀರ್ತಿಕುಮಾರ್, ಹರಿಶ್ಚಂದ್ರ ಕಲ್ಲಟ್ಟೆ, ರಮೇಶ್ ಕಲ್ಲಟ್ಟೆ, ಉಷಾ ಪಾದೆಬೆಟ್ಟು, ಸುಜಾತ ಕಲ್ಲಟ್ಟೆ, ರವಿ ಕಲ್ಲಟ್ಟೆ,  ಆಶಾ ಕಂಚಿನಡ್ಕ, ವಾರಿಜ  ಪಾದೆಬೆಟ್ಟು, ಸುಪ್ರೀತಾ, ಮಹೇಶ್ಚಂದ್ರ ಪಾದೆಬೆಟ್ಟು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News