ಉಡುಪಿ: ​ಲೋಕಾಯುಕ್ತ ಕಾಯ್ದೆಯಡಿ ದೂರು ಸಲ್ಲಿಕೆಗೆ ಅವಕಾಶ

Update: 2022-07-18 16:05 GMT

ಉಡುಪಿ, ಜು.18: ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ವಿಚಾರಣೆ ಬಯಸುವ ಜಿಲ್ಲೆಯ ಸಾರ್ವಜನಿಕರು ನಿಗದಿತ ಪ್ರಪತ್ರದಲ್ಲಿ ದೂರನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಬಹುದು.

ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೂ ಗಂಭೀರವಲ್ಲದ ಸಮಸ್ಯೆ ಗಳನ್ನು ಸ್ಥಳದಲ್ಲೇ ಪರಿಹರಿಸುವ ದೃಷ್ಟಿಯಿಂದ ದೂರು ಅರ್ಜಿಗಳ ಪ್ರಪತ್ರಗಳನ್ನು ಜುಲೈ 21ರಂದು ಬೈಂದೂರು ಪ್ರವಾಸಿ ಮಂದಿರ, ಜುಲೈ 22ರಂದು ಕುಂದಾಪುರ ಪ್ರವಾಸಿ ಮಂದಿರ, ಜುಲೈ 25ರಂದು ಹೆಬ್ರಿ ಪ್ರವಾಸಿ ಮಂದಿರ, ಜುಲೈ 26ರಂದು ಕಾರ್ಕಳ ಪ್ರವಾಸಿ ಮಂದಿರ, ಜುಲೈ 27ರಂದು ಬ್ರಹ್ಮಾವರ ಚಾಂತಾರು ಗ್ರಾಮಪಂಚಾಯತ್ ಕಚೇರಿ ಆವರಣ ಹಾಗೂ ಜುಲೈ 28ರಂದು ಕಾಪು ಪುರಸಭೆ ಕಚೇರಿ ಆವರಣದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಸ್ವೀಕರಿಸಲಾಗುತ್ತದೆ.

ಉಡುಪಿ ತಾಲೂಕಿಗೆ ಸಂಬಂಧಪಟ್ಟ ದೂರು ಅರ್ಜಿಗಳನ್ನು ನೇರವಾಗಿ ಉಡುಪಿ ಲೋಕಾಯುಕ್ತ ಕಛೇರಿಗೆ ನೀಡಬಹುದಾಗಿದೆ. ಕಾರ್ಯಕ್ರಮದಲ್ಲಿ ಉಡುಪಿ ಘಟಕದ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಭಾಗವಸಲಿದ್ದು, ಸಾರ್ವಜನಿಕರು ಸರ್ಕಾರಿ ಕೆಲಸ ಕಾರ್ಯಗಳಲ್ಲಿ ತೊಂದರೆ ಅನುಭಸಿದ್ದಲ್ಲಿ ಉಡುಪಿ ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರ ದೂ.ಸಂಖ್ಯೆ:0820-2958881 ಹಾಗೂ ಪೊಲೀಸ್ ನಿರೀಕ್ಷಕರು ದೂ.ಸಂಖ್ಯೆ: 0820-2536661 ಅನ್ನು ಸಂಪರ್ಕಿಸಬಹುದು ಎಂದು ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News